ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸ್ಲೀಮರಿಗೆ 10 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದು ಹಿಂದುಳಿದ ವರ್ಗವನ್ನು ನಿರ್ಲಕ್ಷಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಹಾಗೂ ಅವರನ್ನು ಬೆಂಬಲಿಸುತ್ತಿರುವ ಅವರ ಪುತ್ರ ಯತೀಂದ್ರ ಇಬ್ಬರೂ ಮುಸ್ಲೀಮರಾಗಿ ಮತಾಂತರವಾಗಿ ಪಾಕಿಸ್ಥಾನಕ್ಕೆ ಹೋಗಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ KSEshwarappa ಚಾಟಿ ಬೀಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಮುಸ್ಲೀಮರಿಗೆ 10 ಸಾವಿರ ಕೋಟಿ ರೂ. ಅನುದಾನ ಕೊಡುವುದಾಗಿ ಹೇಳಿರುವ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ. ಇವರಿಗೆ ಮುಸ್ಲೀಮರ ಅಭ್ಯುದಯ ಮುಖ್ಯವೇ ಹೊರತು ಹಿಂದೂಗಳ ಅಭಿವೃದ್ಧಿಯಲ್ಲ ಎಂದು ಕಿಡಿ ಕಾರಿದರು.

ಭಾರತ ಹಿಂದೂ ರಾಷ್ಟçವಾದರೆ ಪಾಕಿಸ್ಥಾನ ಸೇರಿದಂತೆ ಮುಸ್ಲಿಂ ರಾಷ್ಟçಗಳಂತೆ ಆಗುತ್ತದೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಹುಚ್ಚುತನದಿಂದ ಕೂಡಿದೆ. ವಿಶ್ವದಲ್ಲಿ ಹಿಂದೂ ರಾಷ್ಟç ಆಗುವ ಶಕ್ತಿ ಇರುವುದು ಭಾರತಕ್ಕೆ ಮಾತ್ರ. ಎಲ್ಲ ವರ್ಗ, ಜಾತಿ, ಧರ್ಮಗಳಿಗೆ ಗೌರವ ಕೊಡುವ ನೆಲ ಅದು ನಮ್ಮ ಭಾರತ ಮಾತ್ರ ಎಂದರು.
Also read: ಕರಸೇವಕರ ಬಂಧನ | ಕೇವಲ ರಾಜಕೀಯಕ್ಕಾಗಿ ಪ್ರತಿಭಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ದೇವರು, ದೇವಾಲಯ, ಗೋವು, ಪ್ರಕೃತಿ ಸೇರಿದಂತೆ ಪ್ರತಿಯೊಂದರಲ್ಲೂ ದೇವರನ್ನು ಕಂಡು ಪೂಜಿಸುವ ನೆಲಮೂಲ ಸಂಸ್ಕೃತಿ ಇರುವುದು ನಮ್ಮ ಹಿಂದೂ ಧರ್ಮ ಹಾಗೂ ಭಾರತದಲ್ಲಿ ಮಾತ್ರ. ಇದು ಬೇರೆ ಯಾವುದೇ ದೇಶ ಹಾಗೂ ಧರ್ಮದಲ್ಲಿ ಇದು ಸಾಧ್ಯವಿಲ್ಲ ಎಂದರು.

ಯತೀಂದ್ರ ಸಿದ್ದರಾಮಯ್ಯಗೆ ಹಿಂದೂ ಧರ್ಮದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಮುಖ್ಯಮಂತ್ರಿ ಮಗ ಎಂಬ ಕಾರಣಕ್ಕಾಗಿ ಅವರ ಹೇಳಿಕೆ ಪ್ರಚಾರ ಪಡೆದಿದೆ ಅಷ್ಟೇ ಎಂದು ಕಟಿಕಿಯಾಡಿದರು.










Discussion about this post