ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜ್ಞಾನದ ಸದ್ಬಳಕೆ ಸಮಾಜದ ಬೆಳವಣಿಗೆಗೆ ಬಳಕೆಯಾಗಲಿ ಎಂದು ಖ್ಯಾತ ಸನ್ನದ್ದು ಲೆಕ್ಕ ಪರಿಶೋಧಕ ಶರತ್ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಶನಿವಾರ ಅಂತಿಮ ವರ್ಷದ ಬಿಬಿಎ ಮತ್ತು ಬಿಕಾಂ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.
ಹಿಂಜರಿಕೆ ಎಂಬುದು ನಮ್ಮೊಳಗಿನ ಅತಿ ದೊಡ್ಡ ಶತ್ರು. ವೃತ್ತಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಅನೇಕ ಅವಕಾಶಗಳು ನಮ್ಮ ನಡುವೆಯೇ ಲಭ್ಯವಿದ್ದು, ಯಾವುದೇ ಹಿಂಜರಿಕೆಗಳಿಲ್ಲದೆ ಬಳಸಿಕೊಳ್ಳಿ.
Also read: ಚಿಕ್ಕಮಗಳೂರು | ನಕಲಿ ಚಿನ್ನದ ಆಭರಣ ಅಡವಿಟ್ಟು ವಂಚಿಸಿದ್ದ ಇಬ್ಬರ ಬಂಧನ
ಪದವಿಯ ನಂತರದ ಭವಿಷ್ಯದ ಹಾದಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೆ ನಿಶ್ಚಯಿಸಿಕೊಳ್ಳಿ. ಸರಿ ತಪ್ಪುಗಳ ವಿಮರ್ಶೆ ವಾಸ್ತವಿಕ ಜ್ಞಾನದೊಂದಿಗೆ, ನಾವು ಕಲಿತ ಜ್ಞಾನ ನಮ್ಮ ಜೀವನ ಮತ್ತು ಸಮಾಜದ ಬೆಳವಣಿಗೆಗೆ ಉಪಯೋಗವಾಗಲಿ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಹಣಕಾಸು ಮತ್ತು ಮಾನವ ಸಂಪನ್ಮೂಲ ಕ್ಷೇತ್ರಗಳ ನಿರ್ವಹಣೆಯಲ್ಲಿ ಮನುಷ್ಯನಷ್ಟು ಸರಿ ಸಮಾನವಾಗಿ ಯಾವ ತಂತ್ರಜ್ಞಾನವು ಮಾಡಲಾರದು. ಈ ಹಿನ್ನಲೆಯಲ್ಲಿಯೇ ವಾಣಿಜ್ಯ ಕೋರ್ಸ್‌ಗಳು ಬಹು ಬೇಡಿಕೆಯನ್ನು ಪಡೆದಿದೆ.
ಪದವೀಧರರಿಂದ ಸಮಾಜ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಪಠ್ಯಪುಸ್ತಕಕ್ಕೆ ಸೀಮಿತವಾಗದೆ ಬಹುಮುಖಿ ಕೌಶಲ್ಯತೆಗಳನ್ನು ಹೊಂದಿದ ಪದವೀಧರರಾಗಿ ಅಭಿವೃದ್ಧಿ ಕಾಣಬೇಕು ಎಂದು ಹೇಳಿದರು.
ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ವಿನೂತಾ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಜುಯೇಷನ್ ಗೌನ್ ತೊಟ್ಟು ಮಿಂಚಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post