No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಜಿಲ್ಲೆಯ ಸರ್ವತೋಮುಖ ಪ್ರಗತಿಯ ಆಶಯದೊಂದಿಗೆ ‘ಎಚ್ಚರಿಕೆ’ ಮುನ್ನಡೆಯಲಿ

kalpa News by kalpa News
November 7, 2020
in ಶಿವಮೊಗ್ಗ
0
ಜಿಲ್ಲೆಯ ಸರ್ವತೋಮುಖ ಪ್ರಗತಿಯ ಆಶಯದೊಂದಿಗೆ ‘ಎಚ್ಚರಿಕೆ’ ಮುನ್ನಡೆಯಲಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ದಶಕದಿಂದ ತನ್ನದೇ ಆದ ಛಾಪು ಮೂಡಿಸಿ, ಇಂದಿಗೆ ಬೃಹದಾಕಾರವಾಗಿ ಬೆಳೆದುನಿಂತಿರುವ ಎಚ್ಚರಿಕೆ ಪತ್ರಿಕೆ ನಮ್ಮ ಆತ್ಮೀಯರಾದ ಸೂರ್ಯ ನಾರಾಯಣ ಅವರದ್ದು ಎಂಬುದು ಸಂತಸದ ವಿಚಾರ.

ನನ್ನ 10 ವರ್ಷದ ಪತ್ರಿಕಾರಂಗದ ಸಣ್ಣ ಅನುಭವದಲ್ಲಿ ಹೇಳುವುದಾದರೆ ನಾನು ಈ ಕ್ಷೇತ್ರಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲಿ ಸೂರ್ಯ ನಾರಾಯಣ ಅವರ ಪರಿಚಯವಾಗಿದ್ದು ಮಾತ್ರವಲ್ಲ, ಮೊದಲ ಭೇಟಿಯಲ್ಲೇ ಆತ್ಮೀಯರಂತೆ ಮಾತನಾಡಿಸಿದ್ದು, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅಂದಿನಿಂದ ಇಂದಿನವರೆಗೂ ಹಲವು ಹಂತದಲ್ಲಿ ಅವರ ಸಲಹೆಗಳು ನನಗೆ ಮಾರ್ಗದರ್ಶಿಯಾಗಿವೆ ಎಂದರೆ ತಪ್ಪಾಗಲಾರದು.

ಇಂತಹ ವ್ಯಕ್ತಿಯ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ ಎಚ್ಚರಿಕೆ ಪತ್ರಿಕೆಗೀಗ ದಶಕದ ಸಂಭ್ರಮ. ಈ ಸಂದರ್ಭದಲ್ಲಿ ಆತ್ಮೀಯರಾದ ಸೂರ್ಯ ನಾರಾಯಣ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಇದೇ ವೇಳೆ ಹಿರಿಯರು, ಗುರು ಸಮಾನರೂ, ಕಲ್ಪ ಮೀಡಿಯಾ ಹೌಸ್ ಹಿರಿಯ ಸಲಹಾ ಸಂಪಾದಕರೂ ಆದ ಶ್ರೀ ಡಾ.ಎನ್. ಸುಧೀಂದ್ರ ಅವರು ಎಚ್ಚರಿಕೆ ಪತ್ರಿಕೆಯ ಸಂಪಾದಕರಾದ ಸೂರ್ಯ ನಾರಾಯಣ ಅವರ ಕುರಿತಾಗಿ ಬರೆದಿದ್ದಾರೆ… ಓದಿ…
-ಎಸ್.ಆರ್. ಅನಿರುದ್ಧ ವಸಿಷ್ಠ
ಸಂಪಾದಕರು, ಕಲ್ಪ ಮೀಡಿಯಾ ಹೌಸ್

ಈ ಬೆಳಿಗ್ಗೆ ಮಿತ್ರ ಲಕ್ಷ್ಮೀ ನಾರಾಯಣ ಕಾಶಿ ಫೋನಾಯಿಸಿದರು. ನೀನು, ಶರ್ಮ ಬನ್ನಿ. ಪ್ರವಾಸೋದ್ಯಮ ವೇದಿಕೆ ಚಟುವಟಿಕೆ ಮಾತಾಡುವುದಿದೆ ಎಂದರು. ಸರಿ, ನಾನು ಶರ್ಮ ಅವರ ಬಳಿ ಇದ್ದೆವು. ನಮ್ಮ ಯಾವುದೇ ಸಂವಾದವಿದ್ದರು ನಡುವೆ ಮಾಧ್ಯಮಗಳ ಬಗ್ಗೆ ಒಂದಿಷ್ಟು ಉಪ್ಪಿನಕಾಯಿ ತರ ಅದು ಪ್ರಸ್ತಾಪಕ್ಕೆ ಬರುತ್ತಿತ್ತು.

ಒಂದಿಷ್ಟು ಮಾತುಕತೆಯಾಗುತ್ತಿದ್ದಂತೆ ಸೂರ್ಯನಾಯಣನನ್ನ ಕಂಡು ಒಂದು ಅಭಿನಂದನೆ ಹೇಳಣ ಅಂದರು. ಸೂರ್ಯನಾರಾಯಣ ಉರುಫ್ ಸೂರಿ ನನಗೆ ಬಹಳ ವರ್ಷಗಳಿಂದಲೂ ಮಿತ್ರರು. ನಾನು ಆಕಾಶವಾಣಿಯ ವರದಿಗಾಗಿ ಕಾರ್ಯಕ್ರಮಗಳಿಗೆ ಬಂದಾಗ ಬಹಳಷ್ಟು ಶಿವಮೊಗ್ಗ ಪತ್ರಿಕಾ ಮಿತ್ರರು ಭೇಟಿಯಾಗುತ್ತಿದ್ದರು. ಆ ನಗುಮುಖಗಳಲ್ಲಿ ಸೂರಿಯವರದೂ ಒಂದು.

ಅವರು ಮುಂಚೆ ನಾಗೇಂದ್ರರಾವ್ ನಡೆಸುತ್ತಿದ್ದ ಎಚ್ಚರಿಕೆ ಪತ್ರಿಕೆ ತಾವೇ ವಹಿಸಿಕೊಂಡು ಸಂಪಾದಕರಾಗಿ ಎಚ್ಚರಿಕೆಯಿಂದಲೇ ನಡೆದುಕೊಂಡು ಬಂದಿದ್ದಾರೆ. ಪತ್ರಿಕಾರಂಗದಲ್ಲಿ ಅನುಭವ ಪಡದೇ ಈ ಸಾಹಸಕ್ಕೆ ಧುಮುಕಿದವರು. ಮಾಧ್ಯಮಗಳೆಂದರೆ ಅವು ಹೂವಿನ ಹಾಸಿಗೆ ಅಥವಾ ಸಿದ್ಧಪಡಿಸಿದ ವೃತ್ತಿಯಲ್ಲ. ಅದನ್ನ ಯಾರು ಹಿಡಿಯುತ್ತಾರೋ ಅದು ಅವರನ್ನೇ ಸುತ್ತಿಕೊಳ್ಳುವ ಅಜಗರ. ಅಕ್ಷರ ಹಸಿವಿನ ರಕ್ಕಸ. ಮಾಧ್ಯಮಗಳು, ವಿದ್ಯಮಾನ ಮಿಡಿತಗಳ ಸಮ್ಮಿಲನ. ನಮ್ಮ ದೇಶೀಯ ಇತಿಹಾಸದಲ್ಲಿ ಮಾಧ್ಯಮಗಳ ಮೂಲಸ್ರೋತ ಬಹಳ ಚೇತನಶೀಲ. ಸಂವಹನಗಳು ಬೆಳೆದು ಒಂದೊಂದು ರೂಪ ಪಡೆದವು. ಭಾಷೆಯೂ ಕೂಡ ಅಷ್ಟೇ ಪ್ರಭಾವಶೀಲತೆ ಪಡೆಯಿತು. ಆಂಗಿಕ ಚಲನೆ, ಮಾತು, ಹಾಡು, ರಂಗ, ಬೊಂಬೆ ನೆರಳು ಬೆಳಕು, ಚಿತ್ರಕಲೆ, ಮುದ್ರಣ ಮಾಧ್ಯಮ ದೂರವಾಣಿ, ಸಿನಿಮಾ. ಹೀಗೆ ಅದರ ದಾರಿ.

ವಿದ್ಯುನ್ಮಾನದ ಆವಿಷ್ಕಾರವಾಗಿ ರೇಡಿಯೊ, ಟಿವಿ, ಉಪಗ್ರಹ ಸಂಪರ್ಕ. ಇತ್ಯಾದಿ ಈಗ ಸದ್ಯ ವರ್ತಮಾನ. ಇಷ್ಟು ರೋಚಕವಾಗಿರುವ ಮಾಧ್ಯಮ ಕ್ಷೇತ್ರದಲ್ಲಿ ಒಂದು ಪತ್ರಿಕೆ ನಡೆಸುವುದೆಂದರೆ ಸಾಮಾನ್ಯದ ಮಾತಲ್ಲ. ಈಗ ಸೂರಿ ಅವರ ಎಚ್ಚರಿಕೆಗೆ ಹತ್ತು ವರ್ಷ ತುಂಬಿದೆ. ವರ್ಣರಂಜಿತ ಜಾಹೀರಾತಿನ ಪುಟ ತೋರಿಸಿ ಜಿಲ್ಲಾ ಮಟ್ಟದಲ್ಲಿ ಈ ರೀತಿ ದಿನಪತ್ರಿಕೆ ತರುವುದು ಅತ್ಯಂತ ಸವಾಲಿನ ಕೆಲಸ. ಬಿಪಿ ಏರದಂತೆ, ಸಕ್ಕರೆ ಜಾಡ್ಯ ಸುಳಿಯದಂತೆ ವರ್ಷ ವರ್ಷವೂ ಹೆಜ್ಜೆ ಹಾಕುವುದಿದೆಯಲ್ಲ ಅದು ಗತಿ ಬಿಡಿಸುತ್ತದೆ ಎಂದರು.

ಸುದ್ದಿ ಬೇಕು ನಿಜ. ಅದೊಂದೇ ಸಾಲದು. ಬೆನ್ನುಮೂಳೆಯಾಗಿ ಜಾಹೀರಾತೂ ಬೇಕು. ಪತ್ರಿಕೆ ಸಾರವತ್ತಾಗಿರಲು ತಕ್ಕಂತಹವರ ಸಾಥ್ ಇರಬೇಕು. ಅದಕ್ಕೆ ಸರಿಯಾಗಿ ಕನ್ನಡಪ್ರಭ ಹಿರಿಯ ವರದಿಗಾರ ಅನುಭವಿ ಹೊನ್ನಾಳಿ ಚಂದ್ರು ಇದ್ದಾರೆ. ಅದು ಸೂರಿ ಅವರ ಅದೃಷ್ಟವೆಂದೇ ಹೇಳಬೇಕು. ಕಲಾವಿದ, ನ್ಯಾಯವಾದಿ ಹೀಗೆ ಬಹುಮುಖಿ ಚಂದ್ರು ಅವರ ವ್ಯಕ್ತಿತ್ವ.

ಸಿಹಿಮೊಗೆಯ ಪತ್ರಿಕಾ ಚರಿತ್ರೆಯಲ್ಲಿ ಬಹಳ ಆಗಿಹೋಗಿವೆ. ಉತ್ತಮ ಪತ್ರಕರ್ತರಿದ್ದಾರೆ, ಯಶಸ್ವಿ ಸಂಪಾದಕರಿದ್ದಾರೆ. ವೈವಿಧ್ಯಮಯತೆಗೆ ಶೃಂಗೇಶ್, ಟೆಲೆಕ್ಸ್‌ ರವಿ, ಶಿವಕುಮಾರ್, ಶ್ರೀನಿವಾಸ್, ಅಂಜನಪ್ಪ, ಪಾಶಾ ಹೀಗೆ ಪಟ್ಟಿ ದೊಡ್ಡದಾಗುತ್ತದೆ.

ಸದ್ಯ ಎಚ್ಚರಿಕೆ ದಶಮಾನೋತ್ಸವಕ್ಕೆ ಕಾಲಿಟ್ಟಿದೆ. ಜಿಲ್ಲೆಯ ಸರ್ವತೋಮುಖ ಪ್ರಗತಿಯ ಆಶಯದೊಂದಿಗೆ ಮುನ್ನಡೆಯಲಿ. ಇದೇ ನಮ್ಮೆಲ್ಲರ ಹಾರೈಕೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Kannada News WebsiteLatest News KannadaLocal NewsMalnad NewsShimogaShivamoggaShivamogga Newsಶಿವಮೊಗ್ಗಸಿಹಿಮೊಗೆ
Share211Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಗಮನಿಸಿ! ನ.7ರ ನಾಳೆ ಶಿವಮೊಗ್ಗದ ಈ ಬಡಾವಣೆಗಳಲ್ಲಿ ಕರೆಂಟ್ ಇರುವುದಿಲ್ಲ

Next Post

ಗೃಹರಕ್ಷಕ ಅಧಿಕಾರಿಗಳ ತರಬೇತಿಯಲ್ಲಿ ಭದ್ರಾವತಿಯ ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ

kalpa News

kalpa News

Next Post
ಗೃಹರಕ್ಷಕ ಅಧಿಕಾರಿಗಳ ತರಬೇತಿಯಲ್ಲಿ ಭದ್ರಾವತಿಯ ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ

ಗೃಹರಕ್ಷಕ ಅಧಿಕಾರಿಗಳ ತರಬೇತಿಯಲ್ಲಿ ಭದ್ರಾವತಿಯ ಹೇಮಂತರಾಮನ್ ರಾಜ್ಯಕ್ಕೆ ಪ್ರಥಮ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL