ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಇಂದು ರಾತ್ರಿ 12 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಮದ್ಯ ಮಾರಾಟ ನಿಷೇಧವಿರುವ ಹಿನ್ನೆಲೆಯಲ್ಲಿ ಹಿನ್ನಲೆಯಲ್ಲಿ ಕ್ಯಾಪ್ಟನ್ ಅಜಿತ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ಉಪವಿಭಾಗ, ಶಿವಮೊಗ್ಗ ವಲಯ 1&2, ಜಿಲ್ಲಾ ವಿಚಕ್ಷಣ ದಳ, ಭದ್ರಾವತಿ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಶಿವಮೊಗ್ಗ, ಭದ್ರಾವತಿ ನಗರ ವ್ಯಾಪ್ತಿಯ°è ರಸ್ತೆಗಾವಲು ನಡೆಸಿ, ಗಸ್ತು (ಪಟ್ರೊಲಿಂಗ್) ಮಾಡಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗದ ಉಪ ಅಧೀಕ್ಷಕ ನೌಶದ್ ಖಾನ್ ಹಾಗೂ ನಿರೀಕ್ಷಕರುಗಳಾದ ಶೀಲಾ ಧಾರಜ್ಕರ್ , ಹಾಲಾನಾಯ್ಕ್. ಎನ್, ಭೂಪತಿ, ಮಂಜುನಾಥ್ ಜಿ. ಬಿ, ಸುನೀಲ್ ಕಲ್ಲೂರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post