ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಎಲ್ಲ ಶಾಸ್ತç, ವಿಜ್ಞಾನ ಹಾಗೂ ತತ್ವದಲ್ಲಿಯೂ ಸಹ ಸಾಹಿತ್ಯ ಅಡಗಿದೆ ಎಂದು ಅಕ್ಷರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುರೇಶ್ ಅಭಿಪ್ರಾಯಪಟ್ಟರು.
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸಹೃದಯ ವೇದಿಕೆಯಿಂದ ‘ಪುಸ್ತಕ ಓದು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಹಿತ್ಯ ಆಸಕ್ತಿಯು ನಮ್ಮನ್ನು ಸಹೃದಯರನ್ನಾಗಿಸುತ್ತದೆ, ಒಳ್ಳೆಯ ಕಥೆ, ಕಾದಂಬರಿ, ಕವನಗಳ ಓದಿನಲ್ಲಿ ತಲ್ಲಿನರಾದಾಗ ನಮ್ಮ ಹೃದಯವು ಹಲವು ವಿಚಾರಗಳನ್ನು ಸ್ವೀಕರಿಸಿ ಹೃದಯವಂತಿಕೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಜನಪದ ಸಾಹಿತ್ಯ, ಹಳೆಗನ್ನಡ ಹಾಗೂ ಈಗಿನ ನವ್ಯ ಸಾಹಿತ್ಯ ಎಲ್ಲವೂ ಉಪಯುಕ್ತವಾಗಿದೆ. ಎ¯್ಲÁ ಶಾಸ್ತç, ವಿe್ಞÁನ, ತತ್ವಗಳೂ ಸಾಹಿತ್ಯದಲ್ಲಿ ಅಡಕವಾಗಿದೆ ಎಂದರು.
ಜೆಪಿಎನ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಭಿಷೇಕ್ ಮಾತನಾಡಿ, ಸಾಹಿತ್ಯದ ಆಸಕ್ತಿ ಇಲ್ಲವಾದಲ್ಲಿ ನಾವು ಯಂತ್ರಗಳ ದಾಸರಾಗುವ ಅಪಾಯವಿದೆ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಾದ ಹರ್ಷವರ್ಧನ್, ಸಿಹಾನ್, ಸಂಧ್ಯಾ, ನಿಸರ್ಗ ಹಾಗೂ ದೀಪ್ತಿ ಜಾನಪದ ಗೀತೆಗಳನ್ನು ಹಾಡಿದರು. ವೈಷ್ಣವಿ ಸಾರಾ ಅಬೂಬಕ್ಕರ್ ರವರ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ಕುರಿತು ವಿಷಯ ಮಂಡಿಸಿದರು.
Also read: ಜಯನಗರ ಠಾಣೆ ಮುಂದೆ ಶಾಸಕ ಚನ್ನಬಸಪ್ಪ ಕೈ ಕಟ್ಟಿ ನಿಂತು ಪ್ರತಿಭಟಿಸಿದ್ದು ಯಾಕೆ?
ರಾಧಿಕಾರವರು ಯು.ಆರ್.ಅನಂತಮೂರ್ತಿಯವರ ‘ಅವಸ್ಥೆ’ ಕಾದಂಬರಿಯನ್ನು ತಾನು ಓದಿದ ಅನುಭವದೊಂದಿಗೆ ಹಂಚಿಕೊAಡರು. ಸಿಂಚನ ಕುವೆಂಪುರವರ ‘ಹೋಗುವೆನು ನಾ’ ಕವನವನ್ನು ವಾಚಿಸಿದರು. ಪ್ರಜ್ಞಾದೀಪ್ತಿ ‘ಕರುನಾಳು ಬಾ ಬೆಳಕೆ’ ಕವನ ಗಾಯನ ಮಾಡಿದರು.
ಪ್ರಾಂಶುಪಾಲೆ ಡಾ.ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಎಸ್.ಜಿ. ಸಂತೋಷ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೀತಿ ನಿರೂಪಿಸಿ, ಭಾರ್ಗವಿ ಪ್ರಾರ್ಥಿಸಿದರು. ಅನುಷಾ ಸ್ವಾಗತಿಸಿ, ಚೈತ್ರ ವಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















