ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಹನುಮಂತ ಆರ್. ಬನ್ನಿಕೋಡ್ ಅವರು ಮನೆಖಾತೆ ಮಾಡಲು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಶಿರಸ್ತೇದಾರ ಅರುಣ್‍ಕುಮಾರ್ 3ಲಕ್ಷ ರೂ.ಗಳಿಗೆ ಬೇಡಿಕ ಇಟ್ಟಿದ್ದರು ಎನ್ನಲಾಗಿದೆ.
ಇದನ್ನು ಅವರು ದಾಖಲೆ ಸಮೇತ ಲೋಕಾಯುಕ್ತ ಎಸ್‍ಪಿಯವರಿಗೆ ನೀಡಿದ್ದರು. ಇಂದು ಲೋಕಾಯುಕ್ತ ಎಸ್‍ಪಿ ವಾಸುದೇವ್ ನೇತೃತ್ವದಲ್ಲಿ 1.5ಲಕ್ಷ ರೂ. ನಗದನ್ನು ನೀಡುವಾಗ ದಾಳಿ ಮಾಡಲಾಗಿದೆ. ಮುಂದಿನ ಕಾನೂನು ಕ್ರÀಮ ಕೈಗೊಳ್ಳುವುದಾಗಿ ಎಸ್‍ಪಿ ತಿಳಿಸಿದ್ದಾರೆ
Also read: ಭದ್ರಾವತಿ ಮುಜಾಹಿದ್ ಕೊಲೆ ಪ್ರಕರಣ: ಐವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈಎಸ್‍ಪಿ ಉಮೇಶ್ ನಾಯ್ಕ್, ನಿರೀಕ್ಷಕರುಗಳಾದ ಶಿಲ್ಪ ಹಾಗೂ ರಾಧಾÀಕೃಷ್ಣ ಮತ್ತು 15 ಮಂದಿ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post