ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ಬೈಪಾಸ್ ಹಳೆ ಕಡದಕಟ್ಟೆ ಸಮೀಪ ಇಂದು ಮದ್ಯಾಹ್ನ ಭೀಕರ ಅಪಘಾತ ನಡೆದಿದ್ದು, ಮಹಿಳೆಯ ಮೈಮೇಲೆ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವುಕಂಡಿರುವ ಘಟನೆ ವರದಿಯಾಗಿದೆ.
ಸಾವು ಕಂಡ ಮಹಿಳೆ ಭದ್ರಾವತಿ ತಾರಿಕಟ್ಟೆಯ ಪ್ರೀತಿ ಎಂದು ಗುರುತಿಸಲಾಗಿದ್ದು, ಯುವಕ ಗಂಭೀರಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದೆ.
ಪ್ರಕರಣದ ವಿವರ:
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ದಾಖಲಾಗಿರುವ ಗಂಡನಿಗೆ ತಮ್ಮನ ಜೊತೆಗೆ ಬೈಕ್‌ನಲ್ಲಿ ಬರುತ್ತಿದ್ದ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿ ಬಸ್‌ವೊಂದು ಬೈಕ್‌ಗೆ ಡಿಕ್ಕಿಮಾಡಿಕೊಂಡು ಹೋಗಿದೆ. ಈ ಸಂದರ್ಭದಲ್ಲಿ ರಸ್ತೆಗೆ ಬಿದ್ದದ್ದ ಇವರನ್ನು ಎದುರಿನಿಂದ ಬರುತ್ತಿದ್ದ ಲಾರಿಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post