ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಲದಲ್ಲಿ ಭತ್ತದ ಸುಲಿಯುವ ಕೆಲಸ ನಿರ್ವಹಿಸುವ ವೇಳೆ ಯಂತ್ರಕ್ಕೆ ಸಿಲುಕಿ ಮೂಳೆ ಪುಡಿಪುಡಿಯಾಗಿ, ಜಜ್ಜಿ ಹೋಗಿದ್ದ ವ್ಯಕ್ತಿಯೊಬ್ಬರ ಕೈಯನ್ನು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ #Subbaiah Medical College ವೈದ್ಯರು ಅತಿ ಸೂಕ್ಷ್ಮ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಸರಿಪಡಿಸಿರುವ ಮಹತ್ವದ ಸಾಧನೆ ಮಾಡಿದ್ದಾರೆ.
ಹೊಸೂಡಿ ನಿವಾಸಿ ನಾಗರಾಜ್ (53) ಎನ್ನುವವರು ತಮ್ಮ ಹೊಲದಲ್ಲಿ ಭತ್ತ ಸುಲಿಯುವ ಯಂತ್ರದಲ್ಲಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ಅವರ ಕೈ ಸಿಲುಕಿ ಮೂಳೆಗಳು ಪುಡಿಪುಡಿಯಾಗಿ, ಮಾಂಸಖಂಡಗಳು ಜಜ್ಜಿ ಹೋಗಿದ್ದವರು. ಅಲ್ಲದೇ ತೀವ್ರ ರಸ್ತಸ್ರಾವ ಉಂಟಾಗಿತ್ತು. ತತಕ್ಷಣವೇ ಆ ವ್ಯಕ್ತಿಯನ್ನು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆ ತರಲಾಯಿತು.
ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯ ಡಾ. ಮಧುಕರ್ ನಾಯ್ಡು ಅವರು ತುರ್ತು ಶಸ್ತçಚಿಕಿತ್ಸೆ ನಡೆಸುವುದಾಗಿ ನಿಶ್ಚಯಿಸಿದರು. ತಕ್ಷಣವೇ ಶಸ್ತçಚಿಕಿತ್ಸೆ ಕೊಠಡಿಗೆ ಅವರನ್ನು ಸ್ಥಳಾಂತರಿಸಿ, ಸುಮಾರು 9 ಗಂಟೆಗೂ ಅಧಿಕ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಅದರಲ್ಲಿ ಯಶಸ್ವಿಯಾದರು.
ಈ ರೋಗಿಯು ಮಧುಮೇಹ, ಬಿಪಿ, ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತçಚಿಕಿತ್ಸೆಯೂ ಸಹ ಒಂದು ಸವಾಲಾಗಿತ್ತು. ಆದರೂ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
Also read: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಪ್ರಕಾಶ್ ರಾಜ್? ವೈರಲ್ ಫೋಟೋ ಫ್ಯಾಕ್ಟ್ ಚೆಕ್
ಏನೆಲ್ಲಾ ಸರಿಪಡಿಸಲಾಗಿದೆ?
- ಟೆಂಡನ್
- ನರಗಳು
- ಮುರಿದ ಮೂಳೆಗಳ ಮರುಜೋಡಣೆ
- ನಾಳೀಯ ರಿಪೇರಿ
ಎಷ್ಟು ಗಂಟೆ ಸರ್ಜರಿ?
ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಶಸ್ತ್ರಚಿಕಿತ್ಸೆಯನ್ನು ಸುಮಾರು 9.10 ಗಂಟೆಗೂ ಹೆಚ್ಚು ಕಾಲ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿ ಆರು ದಿನಗಳಲ್ಲಿ ರೋಗಿಯ ಕೈಗಳು ಉತ್ತಮ ಸ್ಥಿತಿಗೆ ಮರಳಿದ್ದು, ಕೈಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಸಹಜ ಸ್ಥಿತಿಗೆ ಇವರು ಮರಳಿದ್ದಾರೆ.
ಈ ಒಂದು ಯಶಸ್ವಿ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ರೋಗಿ, ಆತನ ಕುಟುಂಬಸ್ಥರು ಸಂತಸಗೊಂಡಿದ್ದು, ಕಾಲೇಜಿನ ವೈದ್ಯರು ಹಾಗೂ ಸಿಬ್ಬಂದಿಗಳ ಶ್ರಮ, ಸೇವೆಯನ್ನು ಶ್ಲಾಘಿಸಿದ್ದಾರೆ.
ತುಂಡು ತುಂಡಾಗಿ, ಜಜ್ಜಿಹೋಗಿದ್ದ ಕೈ ಅತಿ ಕ್ಲಿಷ್ಟಕರವಾಗಿದ್ದ ಪರಿಸ್ಥಿತಿಯನ್ನು ಸೂಕ್ಷ್ಮವಾದ ಸರ್ಜರಿ ನಡೆಸಿ ಯಶಸ್ವಿಯಾಗಿರುವುದು, ಇದಕ್ಕಾಗಿ ಬಹುತೇಕ 10 ಗಂಟೆಗಳ ಕಾಲ ಶ್ರಮಿಸಿದ ವೈದ್ಯರ ಕಾರ್ಯ ಶ್ಲಾಘನೀಯ.
ಇದಕ್ಕೆ ಸಹಕರಿಸಿದ ಅನಸ್ತೇಷಿಯಾ ವಿಭಾಗದ ವೈದ್ಯರು, ನರ್ಸ್’ಗಳು, ಸರ್ಜರಿ ನಂತರ ಐಯು ಕೇರ್ ಸಿಬ್ಬಂದಿ, ಕಾಲೇಜಿನ ಆಡಳಿತ ಮಂಡಳಿ ಸೇರಿದಂತೆ ಎಲ್ಲರಿಗೂ ಡಾ.ಮಧುಕರ್ ನಾಯ್ಡು ಕೃತಜ್ಞತೆ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post