ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಪಂಚ ಪೀಠಗಳಲ್ಲೊಂದಾದ ಉತ್ತರಪ್ರದೇಶದ ಕಾಶಿಯ ಜಂಗಮವಾಡಿ ಮಠದಲ್ಲಿ ನಡೆಯುವ ಮಹಾಶಿವರಾತ್ರಿ ಉತ್ಸವದಲ್ಲಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಲು ಶಿವಮೊಗ್ಗದ ಪ್ರತಿಷ್ಟಿತ ನಟನಂ ಬಾಲ ನಾಟ್ಯ ಕೇಂದ್ರದ 20 ಕಲಾವಿದರು ಕಾಶಿಗೆ ತೆರಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿವ, ಪಾರ್ವತಿಯರ ತಾಂಡವ ನೃತ್ಯ, ಭಕ್ತಿ ಪ್ರಧಾನ ನೃತ್ಯ, ಕರ್ನಾಟಕ ಜಾನಪದ ನೃತ್ಯಗಳನ್ನು ಅಭಿನಯಿಸಲಾಗುತ್ತದೆ.
Also read: ಇ-ಆಡಳಿತದ ಮೂಲಕ ನಾಗರಿಕ ಸೇವೆಗಳ ಹೆಚ್ಚಳ: ಪ್ರಿಯಾಂಕ್ ಖರ್ಗೆ
ಈ ತಂಡದಲ್ಲಿ ವಿದುಷಿ ಜೀವಿತ, ಸಂಜನಾ ರಾವ್, ರಕ್ಷಿತಾ, ಶ್ರೀಲಕ್ಷ್ಮ, ಜಾಯ್‌ಲಿನ್, ತನಿಷ್ಕ, ಭಾವನಾ, ಕಾವ್ಯ, ಭೂಮಿಕ, ನಿಹಾನಿ, ಸಂಜನಾ, ಅಮೂಲ್ಯ, ಷಣ್ಮುಖಿ, ಸುಪ್ರಿಯ ಕಾರ್ತಿಕ್, ಶ್ರೇಯ, ಮಧುರ, ಶಿವಾನಿ, ಸೀಮ, ಆಕಾಂಕ್ಷ ರಾಜ್, ಶಾಲಿನಿ, ಭೂಮಿಕ ಇವರುಗಳು ಅಭಿನಯಿಸಲಿದ್ದಾರೆ.
ಈ ತಂಡದ ನೇತೃತ್ವವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್. ಕೇಶವಕುಮಾರ್ ಪಿಳ್ಳೈರರವರು ವಹಿಸುತ್ತಿದ್ದಾರೆ. ನಟನಂ ನಾಟ್ಯಕೇಂದ್ರದ ತಂಡವು ಫೆಬ್ರವರಿ 21ರಂದು ಶಿವಮೊಗ್ಗದಿಂದ ಹೊರಟು ಫೆಬ್ರವರಿ 28ಕ್ಕೆ ಮರಳಿ ಜಿಲ್ಲೆಗೆ ಆಗಮಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post