ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಗ್ರಾಹಕ ಸುರಕ್ಷತಾ ದೃಷ್ಟಿಯಿಂದ ನಗರದ ಹೆಚ್‌ಪಿ ಗ್ಯಾಸ್ ಏಜೆನ್ಸಿಯ ಅಡುಗೆ ಅನಿಲ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಅಡುಗೆ ಅನಿಲ ವಿತರಣಾ ಪೂರ್ವ ಪರಿಶೀಲನಾ ತರಬೇತಿ ಶಿಬಿರವನ್ನು ಏರ್ಪಡಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ಸಂದರ್ಭದಲ್ಲಿ ರಮೇಶ್ ನಟರಾಜನ್ ಅವರು ಶಿಬಿರಾರ್ಥಿಗಳನ್ನುದ್ದೇಶಿ ಮಾತನಾಡಿ, ಎಲ್ಲಾ ಡೆಲಿವರಿ ಹುಡುಗರು ಕಡ್ಡಾಯವಾಗಿ ಪ್ರತಿ ಸಿಲಿಂಡರ್ ಸರಬರಾಜು ಮಾಡುವ ಮುನ್ನ ಕಂಪನಿ ನಿರ್ದೇಶನದಂತೆ ಎಲ್ಲಾ ಸುರಕ್ಷತಾ ಕ್ರಮವನ್ನು ಮತ್ತು ಅಡುಗೆ ಅನಿಲ ವಿತರಣಾ ಪೂರ್ವ ಪರಿಶೀಲನೆಯನ್ನು ಮಾಡಿ ಸಿಲಿಂಡರ್ ಸರಬರಾಜು ಮಾಡಬೇಕು. ಗ್ರಾಹಕ ಸುರಕ್ಷತೆ ಹಾಗೂ ಸೇವೆಯೇ ನಮ್ಮ ಧ್ಯೇಯವಾಗಿರಲಿ ಎಂದು ಕರೆ ನೀಡಿದರು.
ಶ್ರೀ ಮರುಳ ಸ್ವಾಮಿ ಅವರು ಮಾತನಾಡಿ, ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಏನ್ ಹೆಚ್‌ಪಿ ಗ್ಯಾಸ್ ಮಾಲೀಕ ಸುದೀರ್, ಅಭಿನಂದನ್ ಹೆಚ್‌ಪಿ ಗ್ಯಾಸ್ ಏಜೆನ್ಸಿ ಮಾಲೀಕ ಅಭಿನಂದನ್, ಶಿವಮೊಗ್ಗ ಗ್ಯಾಸ್ ಏಜೆನ್ಸಿಯ ಅಭಿಜಿತ್ ಹಾಗೂ ಸೈನಿಕ ಗ್ಯಾಸ್ ಮಾಲೀಕ ಬಸವರಾಜ್, ಭಂಡಾರಿ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಸಂದೀಪ್ ಮತ್ತು ಹೆಚ್ ಪಿ ಗ್ಯಾಸ್ ಏಜೆನ್ಸಿ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post