ಶಿವಮೊಗ್ಗ: ಸಹ್ಯಾದ್ರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಹೆಲಿಟೂರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ಅನುಭವಕ್ಕೆ ಮಲೆನಾಡಿಗರು ಫಿದಾ ಆಗಿದ್ದಾರೆ.
ನಗರದ ಹೆಲಿಪ್ಯಾಡ್‌ನಿಂದ ಹೊರಟು ಶಿವಮೊಗ್ಗ ನಗರವನ್ನು ಆಗಸದಿಂದ ವೀಕ್ಷಿಸುವ ಅಪರೂಪದ ಅವಕಾಶ ಇದಾಗಿದ್ದು, ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಹೆಲಿಟೂರ್‌ಗೆ ಚಾಲನೆ ನೀಡಿದರು.
ಹೆಲಿಪ್ಯಾಡ್ ಬಳಿ ಟಿಕೆಟ್ ಬುಕ್ಕಿಂಗ್ ಲಭ್ಯವಿದ್ದು, ಜಾಲಿ ರೈಡ್‌ಗೆ 2500 ಹಾಗೂ ಅಡ್ವೆಂಚರ್ ರೈಡ್‌ಗೆ 3 ಸಾವಿರ ರೂ. ನಿಗದಿಪಡಿಸಲಾಗಿದೆ.

ಸಹ್ಯಾದ್ರಿ ಉತ್ಸವದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಲಿಟೂರ್ ಆಯೋಜಿಸಿರುವುದು ಸ್ವಾಗತಾರ್ಹ. ನಾವು ನಮ್ಮ ಊರಿನಲ್ಲೇ ವಿಮಾನ ಯಾನ ಕೈಗೊಳ್ಳಲು ಇದರಿಂದ ಸಾಧ್ಯವಾಯಿತು. ಇದೊಂದು ವಿಶೇಷ ಅನುಭವ ಇದು ಸರೋಜಾ ಅವರ ಮಗ ಗಂಗಾಧರ ಅವರ ಸಂತಸದ ನುಡಿ.
ಪ್ಯಾರಾ ಗ್ಲೈಡಿಂಗ್’ಗೆ ವಿಶೇಷ ಅನುಭವ
ನವಿಲೆ ಕ್ರಿಕೆಟ್ ಮೈದಾನದ ಬಳಿ ಸಾಹಸ ಪ್ರಿಯರಿಗಾಗಿ ಪ್ಯಾರಾ ಗ್ಲೈಡಿಂಗ್’ಗೆ ಆಯೋಜಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

(ವರದಿ: ಡಾ.ಸುಧೀಂದ್ರ)








Discussion about this post