ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ನಡೆದ ಮ್ಯಾಮ್ಕೋಸ್‌ನ ಆಡಳಿತ ಮಂಡಳಿ ಚುನಾವಣೆ #MAMCOS Election ಅತ್ಯಂತ ಯಶಸ್ವಿಯಾಗಿದ್ದು, ಷೆರುದಾರರ ಸಹಕಾರ ಮತ್ತು ಆರೈಕೆಯಿಂದ ಸಹಕಾರ ಭಾರತಿ ತಂಡ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮತವನ್ನು ಪಡೆದು ಪುನಃ ಮ್ಯಾಮ್ಕೋಸ್ ಆಡಳಿತದ ಚುಕ್ಕಾಣಿಯನ್ನು ಹಿಡಿದುಕೊಂಡಿದೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಮಹೇಶ್ ಹೆಚ್.ಎಸ್.ಹುಲ್ಕುಳಿ ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಗೆಲುವಿಗೆ ಶ್ರಮಿಸಿದ ಸಹಕಾರ ಭಾರತಿ ಮತ್ತು ಸಂಘಟನೆಯ ಪ್ರಮುಖರು, ಎಲ್ಲಾ ಕಾರ್ಯಕರ್ತರು ಹಾಗೂ ಮ್ಯಾಮ್ಕೋಸ್‌ನ ಷೇರುದಾರರಿಗೆ ಅನಂತಾನಂತ ಧನ್ಯಾವಾದಗಳನ್ನು ಹೇಳಲು ಇಚ್ಛಿಸುತ್ತೇನೆ ಎಂದರು.
ಈ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಸಲಹೆ ಮತ್ತು ಸಹಕಾರವನ್ನು ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ರಿಟರ್ನಿಂಗ್ ಅಧಿಕಾರಿಗಳಾದ ರವಿಚಂದ್ರ ನಾಯಕ್, ಮೇಘನಾ ಆರ್., ಸಹಾಯಕ ರಿಟರ್ನಿಂಗ್ ಅಧಿಕಾರಿಗಳಾದ ಲಿಂಗರಾಜ್, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವೆ ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ರಕ್ಷಣಾ ಇಲಾಖೆಗೆ ಚುನಾವಣಾ ಸಿಬ್ಬಂದಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
Also read: ಮಾದಕ ದ್ರವ್ಯಗಳ ಮಾರಾಟದ ವಿರುದ್ದ ಕಠಿಣ ಕ್ರಮಕ್ಕೆ ಶಾಶ್ವತಿ ಮಹಿಳಾ ವೇದಿಕೆ ಆಗ್ರಹ
ಒಟ್ಟಾರೆಯಾಗಿ ಸಹಕಾರಿ ಪ್ರತಿಷ್ಠಾನ ಮ್ಯಾಮ್ಕೋಸ್‌ನಲ್ಲಿನ ನಮ್ಮ ಸಾಧನೆಯನ್ನು ಸಹಿಸಲಾಗದೆ ಕಳೆದ ಎರಡು ವರ್ಷಗಳಿಂದ ಸಂಘದ ಅಭಿವೃದ್ಧಿಯ ಪ್ರತಿಯೊಂದು ಕೆಲಸಕ್ಕೂ ಹಿನ್ನಡೆ ಉಂಟುಮಾಡಲು ಶ್ರಮಿಸಿದ್ದು, ಅದೆಲ್ಲವನ್ನು ಮೀರಿ ಷೇರುದಾರರು ನಮ್ಮ ಆಡಳಿತವನ್ನು ಒಪ್ಪಿ ನಮ್ಮ ತಂಡದ ಅಭೂತಪೂರ್ವ ಗೆಲುವಿಗೆ ಸಹಕರಿಸಿದ್ದಾರೆ. ಸಂಘದ ವಾರ್ಷಿಕ ಸಭೆಗಳಲ್ಲಿ ಮತ್ತು ಷೇರುದಾರರ ಸಭೆಗಳಲ್ಲಿ ಪ್ರತಿರೋಧ ನಡೆಸುತ್ತ ಬಂದಿರುವ ಸಹಕಾರಿ ಪ್ರತಿಷ್ಠಾನಕ್ಕೆ ಷೇರುದಾರರು ತಕ್ಕ ಉತ್ತರವನ್ನು ನೀಡಿದ್ದಾರೆ.
ಸಹಕಾರ ಭಾರತಿಯು ಆಶ್ವಾಸನೆ ನೀಡಿದಂತೆ ಎಲ್ಲಾ ಭರವಸೆಗಳನ್ನು ಈಡೇರಿಸುವಲ್ಲಿ ಶ್ರಮಿಸುತ್ತ ಸಂಘದ ಮತ್ತು ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಂಕಣ ಬದ್ಧರಾಗಿದ್ದೇವೆ ಎಂದು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ ಎಂದರು.
ನಿನ್ನೆಯ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ದುರುದ್ದೇಶದಿಂದ ಸಹಕಾರ ಭಾರತಿ ಕರ್ನಾಟಕ ಹೆಸರಿನಲ್ಲಿ ಕರಪತ್ರವನ್ನು ಮುದ್ರಿಸಿ ಅದರಲ್ಲಿ ತಮ್ಮ ಅಭ್ಯರ್ಥಿಗಳ ಸಂಖ್ಯೆ ಮತ್ತು ಚಿಹ್ನೆಯನ್ನು ನೀಡಿ ಮತದಾರರ ದಿಕ್ಕು ತಪ್ಪಿಸಿರುವುದನ್ನು ಸಹಕಾರ ಭಾರತಿ ಈ ಮೂಲಕ ಖಂಡಿಸುತ್ತದೆ. ದುರುದ್ದೇಶಪೂರಿತ ಹಾಗೂ ಹತಾಸೆ ಮನೋಭಾವನೆಯಿಂದ ಈ ಕೃತ್ಯ ನಡೆಸಿರುವುದು ಕಂಡು ಬಂದಿದ್ದು, ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿದೆ ಎಂದರು.
ವೈಯುಕ್ತಿಕ ಹಿತಾಸಕ್ತಿಯಿಂದ ಮ್ಯಾಮ್ಕೋಸ್ ಆಡಳಿತವನ್ನು ನಡೆಸಲು ಇವರು ಮುಂದಾಗಿದ್ದು, ಈ ಹಿಂದೆ ನಿಸ್ವಾರ್ಥತೆಯಿಂದ ಈ ಸಂಸ್ಥೆಯನ್ನು ಸ್ಥಾಪಿಸಿ ಕಟ್ಟಿಬೆಳೆಸಿದ ಮಹಾನೀಯರಿಗೆ ಅಪಚಾರ ಎಸಗಿದ್ದು, ಹಣ ಬಲ ಮತ್ತು ಅಧಿಕಾರ ಬಲದಿಂದ ಇಂತಹ ಘನತೆವೆತ್ತ ಸಂಸ್ಥೆಯನ್ನು ಹಾಳುಗೆಡವಲು ಷೇರುದಾರರು ಬಿಡುವುದಿಲ್ಲ ಎಂದು ಮತ್ತೋಮ್ಮೆ ಸಾಬೀತಾಗಿದೆ ಎಂದರು.
ಅರ್ಹ ಮತದಾರರು 11,511 ಇದ್ದು, ನ್ಯಾಯಾಲಯದ ಮುಖಾಂತರ 6,644 ಒಟ್ಟು 18,155 ಮತದಾರರು ಇದ್ದು ಒಟ್ಟು 12,180 ಮತಗಳು (67%) ಚಲಾವಣೆಯಾಗಿದೆ. ಫೆ.24ರವರೆಗೆ ಆಡಳಿತ ಮಂಡಳಿ ಅವಧಿ ಇದ್ದು, 5ನೇ ಬಾರಿಗೆ ಸಹಕಾರ ಭಾರತಿ ಅಧಿಕಾರ ಹಿಡಿದಿದೆ. ಸಹಕರಿಸಿದ ಎಲ್ಲಾ ಷೇರುದಾರರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಸಹಕಾರ ಭಾರತೀಯ ರಾಜ್ಯ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಡಗೆರೆ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಶ್ರೀನಿವಾಸ್ ಕಚ್ಚೋಡಿ, ನಂದನ್ ಹಸಿರುಮನೆ, ಜಿ.ವಿರೂಪಾಕ್ಷ, ಸುರೇಶ್ಚಂದ್ರ, ಕೆ.ವಿ.ಕೃಷ್ಣಮೂರ್ತಿ, ಕೀರ್ತಿರಾಜ್, ವಿನ್ಸಂಟ್ ರೂಡ್ರಿಗಸ್, ಅಣ್ಣಪ್ಪ, ಕುಬೇಂದ್ರಪ್ಪ ಎಂ., ಪ್ರಸನ್ನ ಹೆಬ್ಬಾರ್, ರಮೇಶ್ ಟಿ.ಎಲ್. ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post