ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಯಲು ರೈಲಿನ ಅಡಿಗೆ ವ್ಯಕ್ತಿಯೊಬ್ಬರು ಹಾರಿದ್ದು, ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ಆತನ ಜೀವ ಉಳಿದ ಘಟನೆ ಸಾಗರ ತಾಲೂಕಿನ ಚಂದ್ರಮಾವಿನ ಕೊಪ್ಪಲು ಎಂಬಲ್ಲಿ ನಡೆದಿದೆ.
ತಾಳಗುಪ್ಪದಿಂದ ಮೈಸೂರಿನತ್ತ ಸಾಗುತ್ತಿದ್ದ ರೈಲು ಚಂದ್ರಮಾವಿನ ಕೊಪ್ಪಲು ಸಮೀಪಿಸುತ್ತಿದ್ದಂತೆ, ಹಳಿಗಳ ಮೇಲೆ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಈ ಘಟನೆಯನ್ನು ಗಮನಿಸಿದ ರೈಲಿನ ಲೋಕೋ ಪೈಲಟ್ ಸಮಯ ಪ್ರಜ್ಞೆ ಮೆರೆದು ತಕ್ಷಣವೇ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಕೂಡಲೇ ರೈಲನ್ನು ನಿಲ್ಲಿಸಿ ಕೆಳಗಿಳಿದು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.
ಸ್ಥಳದಲ್ಲಿದ್ದ ಖಾಸಗಿ ಆಂಬ್ಯುಲೆನ್ಸ್ ಮಾಲೀಕ ಗಂಗಾಧರ್ ಅವರ ನೆರವಿನೊಂದಿಗೆ ಗಾಯಾಳುವನ್ನು ತಕ್ಷಣವೇ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.
ಬಳಿಕ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಲೋಕೋ ಪೈಲೆಟ್ ಅವರ ಸಮಯಪ್ರಜ್ಞೆ ಓರ್ವ ವ್ಯಕ್ತಿಯ ಜೀವ ಉಳಿಯಲು ಕಾರಣವಾಗಿರುವುದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















