ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಸಿ.ಭೀಮಸೇನ ರಾವ್ ಕಾನೂನು ಕಾಲೇಜಿನ ವತಿಯಿಂದ ಗುರುವಾರ ಸಂಜೆ ಏರ್ಪಡಿಸಿದ್ದ ಮಂಗಳೂರು ವಲಯ ಮಟ್ಟದ ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಿ.ಬಿ.ಆರ್ ಕಾನೂನು ಕಾಲೇಜು ವಿದ್ಯಾರ್ಥಿಗಳ ತಂಡ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದರು.
ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಹಾಗೂ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ ರನ್ನರ್ ಅಪ್ ಆಗಿ ಬಹುಮಾನ ಪಡೆದರು. ಎರಡು ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ರಾಜ್ಯದ 10 ಕಾನೂನು ಕಾಲೇಜಿನ ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದರು.
ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ). ಸ್ವರ ಏಕಗಾನ (Classical Vocal Solo) ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ). ರಂಗೋಲಿ ಸ್ಪರ್ಧೆಯಲ್ಲಿ ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ಸ್ಪಾಟ್ ಪೇಂಟಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ).
ಲಘು ಗಾಯನ (Light Vocal) ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ಗುಂಪು ಗಾಯನ (Group Song) ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ಪ್ರಥಮ), ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜು (ದ್ವಿತೀಯ).
ಕಾರ್ಟೂನಿಂಗ್ ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ಶಾರದ ಕಾಲೇಜು ಚಿಕ್ಕಮಗಳೂರು (ದ್ವಿತೀಯ). ಜನಪದ ನೃತ್ಯ (Folk Dance) ಸ್ಪರ್ಧೆಯಲ್ಲಿ ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ).
ಜನಪದ ವಾದ್ಯವೃಂದ (Folk Orchestra) ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ). ಚರ್ಚಾ ಸ್ಪರ್ಧೆ (Debate) ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ಪ್ರಥಮ), ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ).
ವಾಗ್ಮಿತಾ ಸ್ಪರ್ಧೆಯಲ್ಲಿ (Elocution) ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ಪ್ರಥಮ), ಎಂ.ಕೃಷ್ಣ ಕಾನೂನು ಕಾಲೇಜು ಹಾಸನ (ದ್ವಿತೀಯ). ಮೈಮ್ ಸ್ಪರ್ಧೆಯಲ್ಲಿ ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ದ್ವಿತೀಯ).
ಮಿಮಿಕ್ರಿ ಸ್ಪರ್ಧೆಯಲ್ಲಿ ವೈಕುಂಠ ಬಾಳಿಗ ಕಾನೂನು ಕಾಲೇಜು ಉಡುಪಿ (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ). ನಾಟಕ ಸ್ಪರ್ಧೆಯಲ್ಲಿ (Skit) ಆಳ್ವಾಸ್ ಕಾನೂನು ಕಾಲೇಜು (ಪ್ರಥಮ), ಸಿಬಿಆರ್ ಕಾನೂನು ಕಾಲೇಜು ಶಿವಮೊಗ್ಗ (ದ್ವಿತೀಯ) ಸ್ಥಾನ ಪಡೆದರು.
ಮುಖ್ಯ ಅತಿಥಿಗಳಾದ ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಡಾ.ಗಣೇಶ್.ಆರ್.ಕೆಂಚನಾಲ್ ಮಾತನಾಡಿ, ಭಾರತ ತನ್ನದೇ ಆದ ವಿಶಿಷ್ಟ ಸಾಹಿತ್ಯ, ಸಾಂಸ್ಕೃತಿಕ ನೆಲೆಗಟ್ಟನ್ನು ಹೊಂದಿದೆ. ಜಗತ್ತಿನಲ್ಲಿ ಸ್ನೇಹವೆಂಬುದು ಎಲ್ಲಾ ಸಂದರ್ಭದಲ್ಲಿ ಸಲ್ಲುವ ಗಟ್ಟಿ ಸಂಬಂಧ. ಮನುಷ್ಯತ್ವವನ್ನು ಕಲಿಸುವ ಪ್ರಬಲವಾದ ಶಕ್ತಿ ಸಾಂಸ್ಕೃತಿಕ ಚಿಂತನೆಗೆ ಇದೆ. ಈ ಹಿನ್ನಲೆಯಲ್ಲಿ ಪರಿಶ್ರಮದ ಮೂಲಕ ಯುವ ಸಮೂಹ, ಸಮಾಜಮುಖಿಯಾಗಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಎಸ್.ಕಾಂತರಾಜ್, ತನುಶ್ರೀ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















