ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ #Southwestern Graduate and Teachers Constituency Election Result ನಾಳೆ ಹೊರಬೀಳಲಿದ್ದು, ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು ಗೆಲ್ಲುತ್ತೇವೆ ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಸುಮಾರು 20 ಸಾವಿರ ಹೆಚ್ಚು ಮತದಾನವಾಗಿದೆ. 85 ಸಾವಿರ ಮತದಾರರಿದ್ದರು. 69 ಸಾವಿರ ಮತ ಚಲಾವಣೆಯಾಗಿದೆ. ಎಲ್ಲಾ ಕಡೆ ಒಳ್ಳೆ ವಾತಾವರಣವಿತ್ತು. ನಾನು ಸೇರಿದಂತೆ ಶಿಕ್ಷಕರ ಕ್ಷೇತ್ರದ ಡಾ.ಕೆ.ಕೆ. ಮಂಜುನಾಥ್ ಕೂಡ ಗೆಲ್ಲಲಿದ್ದಾರೆ ಎಂದರು.

ಹೋರಾಟ ಮತ್ತು ಹಣದ ನಡುವೆಯ ಚುನಾವಣೆ ಇದಾಗಿತ್ತು. ಎರಡು ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ನೀಡಿದ್ದರು. ನನಗೆ ಬಿಜೆಪಿಯ ಅಭ್ಯರ್ಥಿಗಿಂತ ಬಂಡಾಯ ಅಭ್ಯರ್ಥಿಯಾಗಿದ್ದ ರಘುಪತಿಭಟ್‍ಅವರೇ ಪೈಪೋಟಿ ನೀಡಿದ್ದಾರೆ ಎನಿಸಿದೆ. ನಾನು ಮೊದಲ ಸ್ಥಾನದಲ್ಲಿದ್ದೇನೆ. ನಂತರ ಸ್ಥಾನದಲ್ಲಿ ಉಳಿದವರು ಇದ್ದಾರೆ ಎಂದರು.

Also read: ಅಭಿವೃದ್ಧಿಯ ಮಹಾಪೂರದಿಂದಾಗಿ ರಾಘವೇಂದ್ರರ ಗೆಲುವು | ಕಡಿದಾಳ್ ಗೋಪಾಲ್
ಶಿವಮೊಗ್ಗದಲ್ಲಿ ಮೋದಿ ಗೆದ್ದರು, ದೇಶದಲ್ಲಿ ಮೋದಿ ಗೆಲ್ಲಲು ಆಗಲಿಲ್ಲ. 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತೇವೆ ಎಂದಿದ್ದರು. ಆದರೆ ಸರಳ ಬಹುಮತವು ಬರಲಿಲ್ಲ. ಶ್ರೀರಾಮನನ್ನು ಮಧ್ಯ ತಂದರು. ಅದು ಕೆಲಸ ಮಾಡಲಿಲ್ಲ. ಉತ್ತರ ಪ್ರದೇಶದಲ್ಲಿ ಅವರು 35 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಲಕ್ಷ್ಮಣಪ್ಪ, ಮಲ್ಲೇಶ್, ಧೀರರಾಜ್ ಹೊನ್ನವಿಲೆ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post