ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾರ್ಚ್ 18ರ ಸೋಮವಾರ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ನಗರಕ್ಕೆ ಭೇಟಿ ನೀಡಲಿದ್ದು, ಈ ಹಿನ್ನೆಲೆಯಲ್ಲಿ ನಗರ ಹಾಗೂ ನಗರವನ್ನು ಸಂಪರ್ಕಿಸುವ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಮತ್ತು ಬದಲಾವಣೆಗಳನ್ನು ಮಾಡಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ DC Gurudutta Hegde ಅವರು ಆದೇಶ ಹೊರಡಿಸಿದ್ದು, ಪ್ರಧಾನಿಯವರ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ನಗರ ಹಾಗೂ ನಗರವನ್ನು ಸಂಪರ್ಕಿಸುವ ಹಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಹಾಗೂ ಬದಲಾವಣೆಗಳನ್ನು ಮಾಡಲಾಗಿದೆ. ಅದರೊಂದಿಗೆ ವಾಹನ ನಿಲುಗಡೆ ಸ್ಥಳಗಳನ್ನೂ ಸಹ ಸೂಚನೆ ನೀಡಲಾಗಿದೆ.
ಯಾವೆಲ್ಲಾ ರಸ್ತೆಗಳಲ್ಲಿ ಸಂಚಾರ ನಿಷೇಧ?
(ಮಾರ್ಚ್ 18ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ)
- ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್’ಎಸ್ ಸರ್ಕಲ್, ಶಂಕರ ಮಠ ಸರ್ಕಲ್, ಕರ್ನಾಟಕ ಸಂಘ, ಶಿವಪ್ಪ ನಾಯಕ ಸರ್ಕಲ್, ಎಎ ಸರ್ಕಲ್, ಅಶೋಕ ಸರ್ಕಲ್, ಹೆಲಿಪ್ಯಾಡ್ ಸರ್ಕಲ್’ವರೆಗೆ.
- ಹೆಲಿಪ್ಯಾಡ್ ಸರ್ಕಲ್’ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್, ವಿನೋಬನಗರ 60 ಅಡಿ ರಸ್ತೆ, ಸೈಕಲೋತ್ಸವ ಸರ್ಕಲ್, ರಾಜಕುಮಾರ್ ಸರ್ಕಲ್’ವರೆಗೆ.
- ಪೊಲೀಸ್ ಚೌಕಿಯಿಂದ ಉಷಾ ಸರ್ಕಲ್’ವರೆಗೆ
- ಲಕ್ಷ್ಮೀ ಟಾಕೀಸ್ ಸರ್ಕಲ್’ನಿಂದ ಜೈಲು ರಸ್ತೆ, ಕುವೆಂಪು ರಸ್ತೆ ಮಾರ್ಗವಾಗಿ ಹೆಲಿಪ್ಯಾಡ್ ಸರ್ಕಲ್.
ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ:
- ಎನ್ ಆರ್ ಪುರದಿಂದ ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ್, ಹುಣಸೆಕಟ್ಟೆ ಜಂಕ್ಷನ್ ಮೂಲಕ ಭದ್ರಾವತಿ ತಲುಪಬೇಕು.
- ಶಿಕಾರಿಪುರ, ಹೊನ್ನಾಳಿ ಮತ್ತು ದಾವಣಗೆರೆ ಕಡೆಗೆ ಎನ್ ಆರ್ ಪುರ ಕಡೆಗೆ ಹೋಗುವ ವಾಹನಗಳು ಎನ್ ಟಿ ರಸ್ತೆ ಮೂಲಕ ಎನ್ ಆರ್ ಪುರಕ್ಕೆ ತೆರಳಬೇಕು.
- ಎಂಆರ್’ಎಸ್ ಸರ್ಕಲ್ ಕಡೆಯಿಂದ ಬಿಎಚ್ ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣ ಮತ್ತು ಸಾಗರ, ತೀರ್ಥಹಳ್ಳಿ, ಹೊಸನಗರ ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲ ರೀತಿಯ ವಾಹನಗಳು ಎಂಆರ್’ಎಸ್ ಬೈಪಾಸ್ ಮಾರ್ಗವಾಗಿ ಸಂದೇಶ್ ಮೋಟಾರ್ಸ್ ಸರ್ಕಲ್, ಮಂಡ್ಲಿ ಸರ್ಕಲ್, ಗೋಪಾಳ, ಆಲ್ಕೊಳ ಸರ್ಕಲ್ ಮಾರ್ಗವಾಗಿ ತೆರಳಬೇಕು.
- ಭದ್ರಾವತಿ, ಬೆಂಗಳೂರು ಕಡೆಗೆ ಹೋಗುವ ದ್ವಿಚಕ್ರ, ನಾಲ್ಕು ಚಕ್ರ ಮತ್ತು ಎಲ್ಲಾ ರೀತಿಯ ವಾಹನಗಳು ಆಲ್ಕೊಳ ಸರ್ಕಲ್, ಗೋಪಾಳ, ಮಂಡ್ಲಿ ಸರ್ಕಲ್, ಸಂದೇಶ್ ಮೋಟಾರ್ಸ್ ಸರ್ಕಲ್, ಬೈಪಾಸ್ ಮಾರ್ಗವಾಗಿ ತೆರೆಳಬೇಕು.
- ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೊಳ ಸರ್ಕಲ್, ಗೋಪಾಳ ಸರ್ಕಲ್, ನ್ಯೂ ಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆಗೆ ತೆರಳಬೇಕು.
- ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ್, ಗೋಪಾಳ ಸರ್ಕಲ್, ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ತಲುಪಬೇಕು.
- ಶಿವಮೊಗ್ಗದಿಂದ ಶಿಕಾರಿಪುರ, ನ್ಯಾಮತಿ ಸೊರಬ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು, ಹಾರನಹಳ್ಳಿ, ಸವಳಂಗ ಮಾರ್ಗವಾಗಿ ಚಲಿಸಬೇಕು.
- ಶಿಕಾರಿಪುರ ನ್ಯಾಮತಿ ಸೊರಬ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಎಲ್ಲಾ ವಾಹನಗಳು ಸವಳಂಗ, ಹರ‍್ನಳ್ಳಿ, ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪುಬೇಕು.
- ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡಾಗಳಿಗೆ ಹೋಗುವ ಎಲ್ಲಾ ವಾಹನಗಳು ರಾಗಿಗುಡ್ಡ, ಕುವೆಂಪು ನಗರದ ಮೂಲಕ ಸಂಚರಿಸಬೇಕು.
- ಅಬ್ಬಲಗೆರೆ ಕೊಮ್ಮನಾಳ್, ಕುಂಚೇನಹಳ್ಳಿ, ತಾಂಡಾಗಳಿAದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು ಕುವೆಂಪು ನಗರ, ರಾಗಿಗುಡ್ಡ, ಸಂಗೊಳ್ಳಿರಾಯಣ್ಣ ಸರ್ಕಲ್ ಮುಖಾಂತರ ಸಂಚರಿಸಬೇಕು.
- ಕುವೆಂಪು ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದ ಕಡೆಗೆ ಅಥವಾ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಸಂಚರಿಸುವ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸವಾರರು ಜೈಲ್ ಸರ್ಕಲ್’ನಿಂದ ಎಡಕ್ಕೆ ತಿರುಗಿ, ಶಿವಮೊಗ್ಗ ಆಪ್ಟಿಕಲ್, ಗೌರವ್ ಲಾಡ್ಜ್, ಸರ್ಕಲ್’ನಿಂದ ಬಲಕ್ಕೆ ತಿರುಗಿ ಬಸ್ ನಿಲ್ದಾಣಕ್ಕೆ ಬಂದು ಸೇರಬೇಕು.
- ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಜೈಲ್ ಸರ್ಕಲ್, ಶಿವಮೂರ್ತಿ ಸರ್ಕಲ್ ಕಡೆ ಹೋಗುವ ಬೈಕ್, ಕಾರುಗಳು ವಾಹನಗಳು ಅಶೋಕ ಸರ್ಕಲ್ ಮೂಲಕ ಬಿಎಚ್ ರಸ್ತೆ, ಗುಜರಿಕ್ರಾಸ್’ನಲ್ಲಿ ಎಡಕ್ಕೆ ತಿರುಗಿ ಗೌರವ್ ಲಾಡ್ಜ್ ಮಾರ್ಗ ಮೂಲಕ ಜೈಲ್ ಸರ್ಕಲ್ ತಲುಪಬೇಕು.
- ಪೊಲೀಸ್ ಚೌಕಿಯಿಂದ ಬಸ್ ನಿಲ್ದಾಣದ ಕಡೆಗೆ ಬರುವಂತಹ ಬೈಕ್ ಹಾಗೂ ಕಾರುಗಳು ಪೊಲೀಸ್ ಚೌಕಿ, ಕರಿಯಣ್ಣ ಬಿಲ್ಡಿಂಗ್, ಆಲ್ಕೊಳ ಸರ್ಕಲ್, ಆಯನೂರು ಗೇಟ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪಬೇಕು.
- ಲಕ್ಷ್ಮೀ ಟಾಕೀಸ್ ಸರ್ಕಲ್ ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಬರುವ ಬೈಕ್, ಕಾರುಗಳು ಶಿವಮೂರ್ತಿ ವೃತ್ತ ಮಾರ್ಗವಾಗಿ ಮಹಾವೀರ ಸರ್ಕಲ್, ಗೋಪಿ ಸರ್ಕಲ್, ಎಎ ಸರ್ಕಲ್ ಮಾರ್ಗವಾಗಿ ಬಸ್ ನಿಲ್ದಾಣ ತಲುಪಬೇಕು.
Also read: ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮತದಾನದ ಅವಕಾಶ ಕಲ್ಪಿಸಿದ ಆಯೋಗ
ಎಲ್ಲೆಲ್ಲಿ ವಾಹನ ನಿಲುಗಡೆ ನಿಷೇಧ?
- ಹೆಲಿಪ್ಯಾಡ್ ಸರ್ಕಲ್’ನಿಂದ ಕುವೆಂಪು ರಸ್ತೆ ಮಾರ್ಗವಾಗಿ ನಂದಿ ಪೆಟ್ರೋಲ್ ಬಂಕ್ ಕ್ರಾಸ್’ನಿಂದ ವಿನೋಬನಗರ ಕೆಳದಿ ಚೆನ್ನಮ್ಮ ರಸ್ತೆ(60 ಅಡಿ ರಸ್ತೆ), ಸೈಕಲೋತ್ಸವ ಸರ್ಕಲ್’ನಿಂದ ವಿನೋಬನಗರ ಸರ್ಕಲ್’ನಿಂದ ಕೆಇಬಿ ಆಫೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಿದೆ.
- ಹೆಲಿಪ್ಯಾಡ್ ಸರ್ಕಲ್’ನಿಂದ ಕುವೆಂಪು ರಸ್ತೆಯ ಜೈಲ್ ಸರ್ಕಲ್’ವರೆಗೆ ಹಾಗೂ ಜೈಲ್ ಸರ್ಕಲ್’ನಿಂದ ಲಕ್ಷಿö್ಮÃ ಟಾಕೀಸ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಿದೆ.
- ರಾಜಕುಮಾರ್ ಸರ್ಕಲ್’ನಿಂದ ಮೇದಾರಕೇರಿ ರಸ್ತೆ, ಬೊಮ್ಮನಕಟ್ಟೆ ರೈಲ್ವೆ ಗೇಟ್ ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧ.
- ಪೊಲೀಸ್ ಚೌಕಿಯಿಂದ ರೈಲ್ವೇ ಟ್ರಾಕ್ ಪಕ್ಕದಲ್ಲಿ ಶನೈಶ್ಚರ ದೇವಾಲಯ ರಸ್ತೆ ಮಾರ್ಗವಾಗಿ ಬೊಮ್ಮನಕಟ್ಟೆ ರೈಲ್ವೆ ಗೇಟ್ ಹೋಗುವ ರಸ್ತೆ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಿದೆ.
- ಆಲ್ಕೊಳ ಸರ್ಕಲ್’ನಿಂದ ಪೊಲೀಸ್ ಚೌಕಿ ಮಾರ್ಗವಾಗಿ ಉಷಾ ಸರ್ಕಲ್’ವರೆಗೆ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಿದೆ.
- ಸೋಗಾನೆ ವಿಮಾನ ನಿಲ್ದಾಣದಿಂದ ಎಂಆರ್’ಎಸ್ ಸರ್ಕಲ್, ವಿದ್ಯಾನಗರ, ಶಂಕರಮಠ ಸರ್ಕಲ್, ಕರ್ನಾಟಕ ಸಂಘ, ಎಸ್ ಎನ್ ಸರ್ಕಲ್, ಎಎ ಸರ್ಕಲ್, ಅಶೋಕ ಸರ್ಕಲ್, ಹೆಲಿಪ್ಯಾಡ್ ಸರ್ಕಲ್’ವರೆಗೆ ಎರಡೂ ಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.
ಎಲ್ಲೆಲ್ಲಿ ಪಾರ್ಕಿಂಗ್ ಅವಕಾಶ?
- ತೀರ್ಥಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಎಡಕ್ಕೆ ತಿರುಗಿ ಗೋಪಾಳ ಸರ್ಕಲ್, ಆಲ್ಕೊಳ ಸರ್ಕಲ್, ಬಲಕ್ಕೆ ತಿರುಗಿ ಎಪಿಎಂಸಿ ಒಳಭಾಗಕ್ಕೆ ಬಂದು ಗುರುತಿಸಿದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಬೇಕು.
- ಸಾಗರ, ಹೊಸನಗರ ಭಾಗಗಳಿಂದ ಬರುವ ವಾಹನಗಳು ಆಲ್ಕೊಳ ಸರ್ಕಲ್ ಸಾಗರ ರಸ್ತೆ, ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿಗೆ ಬಂದು ಎಪಿಎಂಸಿ, ಸೋಮಿನಕೊಪ್ಪ, ಆದರ್ಶನಗರ ಲೇಔಟ್ ಕಡೆಗಳಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ನಿಲುಗಡೆ ಮಾಡಬೇಕು.
- ಶಿಕಾರಿಪುರ, ಶಿರಾಳಕೊಪ್ಪ, ಆನವಟ್ಟಿ ಕಡೆಗಳಿಂದ ಬರುವ ವಾಹನಗಳು ಬಸವನಗಂಗೂರು, ಬೊಮ್ಮನಕಟ್ಟೆ ಮಾರ್ಗವಾಗಿ ಬಂದು ಬೊಮ್ಮನಕಟ್ಟೆ, ಎಸ್ ಎಲ್ ಕೆ ಲೇ ಔಟ್’ನಲ್ಲಿ ಪಾರ್ಕಿಂಗ್ ಮಾಡಬೇಕು.
- ಹೊನ್ನಾಳಿ, ಹರಿಹರ, ದಾವಣಗೆರೆ, ಹಾವೇರಿ ಕಡೆಯಿಂದ ಬರುವ ವಾಹನಗಳು ಬೊಮ್ಮನಕಟ್ಟೆ, ಎಸ್ ಎಲ್ ಕೆ ಲೇ ಔಟ್’ನಲ್ಲಿ ಪಾರ್ಕಿಂಗ್ ಮಾಡಬೇಕು.
- ಭದ್ರಾವತಿ, ಚಿಕ್ಕಮಗಳೂರು, ಎನ್ ಆರ್ ಪುರ, ಕೊಪ್ಪದಿಂದ ಬರುವ ವಾಹನಗಳು ಎಂಆರ್’ಎಸ್ ಸರ್ಕಲ್, ಬೈಪಾಸ್ ರಸ್ತೆ, ಸಂದೇಶ್ ಮೋಟಾರ್ಸ್ ಸರ್ಕಲ್, ನ್ಯೂ ಮಂಡ್ಲಿ ಸರ್ಕಲ್, ಗೋಪಾಳ ಸರ್ಕಲ್, ಆಲ್ಕೊಳ ಸರ್ಕಲ್ ಬಲಕ್ಕೆ ತಿರುಗಿ, ಎಪಿಎಂಸಿ ಒಳಭಾಗದಲ್ಲಿ ಪಾರ್ಕಿಂಗ್ ಮಾಡಬೇಕು.
- ಹೊಳೆಹೊನ್ನೂರು, ಚನ್ನಗಿರಿ, ಚಿತ್ರದುರ್ಗ ಕಡೆಯಿಂದ ಬರುವ ವಾಹನಗಳು ಹೊಳೆಹೊನ್ನೂರು ಸರ್ಕಲ್, ಶಂಕರ ಮಠ ಸರ್ಕಲ್, ಕೆಇಬಿ ಸರ್ಕಲ್, ರೈಲ್ವೆ ನಿಲ್ದಾಣ ರಸ್ತೆ, ಉಷಾ ಸರ್ಕಲ್ ಬಂದು ನೆಹರೂ ಕ್ರೀಡಾಂಗಣ, ಕುವೆಂಪು ರಂಗಮAದಿರ, ಎನ್’ಇಎಸ್ ಮೈದಾನ, ಶೇಷಾದ್ರಿಪುರಂ ಗೂಡ್ಸ್ ಶೆಡ್, ಸೈನ್ಸ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post