ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಈಶ್ವರಪ್ಪ ವೈಯಕ್ತಿಕವಾಗಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಟಿಕೇಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ Yadiyurappa ಬೇಸರ ವ್ಯಕ್ತಪಡಿಸಿದ್ದಾರೆ.
ಈಶ್ವರಪ್ಪ Eshwarappa ಅಸಮಾಧಾನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಟಿಕೇಟ್ ಹಂಚಿಕೆ ವಿಚಾರದಲ್ಲಿ ಕೇಂದ್ರ ನಾಯಕರ ತೀರ್ಮಾನವೇ ಅಂತಿಮವಾಗಿದ್ದು, ಅವರೇ ಈಶ್ವರಪ್ಪ ಬಳಿ ಮಾತನಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
Also read: ಮಾರ್ಚ್ 18 ಪ್ರಧಾನಿ ಭೇಟಿ ಹಿನ್ನೆಲೆ | ನಗರದ ಹಲವೆಡೆ ಮಾರ್ಗ ಬದಲಾವಣೆ | ಇಲ್ಲಿದೆ ವಿವರ
ಶೋಭಾ ಕರಂದ್ಲಾಜೆ, Shobha Karandlaje ಬೊಮ್ಮಾಯಿಯವರಿಗೆ Bommai ಯಡಿಯೂರಪ್ಪ ಅಲ್ರಿ ಟಿಕೆಟ್ ಕೊಟ್ಟಿರೋದು. ಹೈಕಮಾಂಡ್ ನಾಯಕರು ಕೊಟ್ಟಿರೋದು. ಈಶ್ವರಪ್ಪ ವೈಯಕ್ತಿಕವಾಗಿ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ. ಟಿಕೆಟ್ ವಿಚಾರದಲ್ಲಿ ನನ್ನ ಪಾತ್ರವಿಲ್ಲ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post