ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಪಿಇಎಸ್ ಕಾಲೇಜಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ವತಿಯಿಂದ ಉದ್ಯೋಗಕ್ಕಾಗಿ ಮಾರ್ಚ್ 9ರಂದು ಸಂದರ್ಶನವನ್ನು ಏರ್ಪಡಿಸಲಾಗಿದೆ.
ಮಾರ್ಚ್ 9ರ ನಾಳೆ ಬೆಳಗ್ಗೆ 8.30ರಿಂದ ಸಂದರ್ಶನ ನಡೆಯಲಿದ್ದು, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ನೀಡುವ ಡಿಪ್ಲೊಮಾ ಅಪ್ರೆಂಟಿಸ್ ತರಬೇತಿ ಕಾರ್ಯಕ್ರಮ ಇದಾಗಿದ್ದು, ಕ್ಯಾಂಪಸ್ ಸಂದರ್ಶನ ನಡೆಯಲಿದೆ.
ಯಾರೆಲ್ಲಾ ಪಾಲ್ಗೊಳ್ಳಲು ಅವಕಾಶವಿದೆ?
ಈ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲೆಯ 2023 ರಲ್ಲಿ ಪಾಸಾಗುವ ಡಿಪ್ಲೊಮಾ ಮೆಕ್ಯಾನಿಕಲ್ ಹಾಗೂ ಆಟೋಮೊಬೈಲ್ ಓದಿದ ಅಭ್ಯರ್ಥಿಗಳಿಗೆ ಪಾಲ್ಗೊಳ್ಳಲು ಅವಕಾಶವಿದೆ.
Also read: ಚುನಾವಣಾ ಸ್ಪರ್ಧೆ ಬಗ್ಗೆ ಡಾ. ಧನಂಜಯ ಸರ್ಜಿ ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ
ಅರ್ಹತೆಯೇನು?
ಎಸ್’ಎಸ್’ಎಲ್’ಸಿ (ಮೊದಲ ಪ್ರಯತ್ನ) ಹಾಗೂ ಡಿಪ್ಲೊಮಾದಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿರಬೇಕು. ವಯಸ್ಸು 18 ರಿಂದ 24 ರ ನಡುವೆ ಇರಬೇಕು, ಕನ್ನಡ ಮತ್ತು ಆಂಗ್ಲ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು. 3ಕ್ಕಿಂತ ಹೆಚ್ಚು ವಿಷಯಗಳನ್ನು ಬ್ಯಾಕ್’ಲಾಗ್ ಉಳಿಸಿಕೊಂಡಿರಬಾರದು.
ಏನೆಲ್ಲಾ ದಾಖಲೆ ಬೇಕು?
ಈ ಮೇಲ್ಕಂಡ ಅರ್ಹತೆ ಹೊಂದಿದ ಆಸಕ್ತ ವಿದ್ಯಾರ್ಥಿಗಳು, ಕೆಳಕಂಡ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಇತ್ತೀಚಿನ ಸ್ವ ವಿವರ (ಸಿ ವಿ), ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಎಸ್’ಎಸ್’ಎಲ್’ಸಿ ಮತ್ತು ಡಿಪ್ಲೊಮಾ ಅಂಕಪಟ್ಟಿ (ಮೊದಲನೆಯ ಸೆಮಿಸ್ಟರ್’ನಿಂದ ಇಲ್ಲಿಯವರೆಗಿನ ಎಲ್ಲಾ ಅಂಕಪಟ್ಟಿಯ ಮೂಲ ಪ್ರತಿಗಳು ಮತ್ತು ನಿಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಧೃಡೀಕರಿಸಿದ ಛಾಯಾ ಪ್ರತಿಗಳು) ತರಬೇಕು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















