ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತಿಯಿಂದ ದೂರವಾಗಿದ್ದ ವಿವಾಹಿತೆ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಪ್ಪನ್‌ಪೇಟೆ ಸಮೀಪದ ತಮ್ಮಡಿಕೊಪ್ಪದಲ್ಲಿ ನಡೆದಿದೆ.
ತಮ್ಮಡಿಕೊಪ್ಪ ಗ್ರಾಮದ ಸುಜಾತ (33) ಆಯನೂರು ಕೋಟೆ ಗ್ರಾಮದ ಸಚಿನ್ (27) ಮೃತರು ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ಸುಜಾತಾ ಪತಿ ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದು, ಕಳೆದ ಮೂರು ನಾಲ್ಕು ವರ್ಷದಿಂದ ಸಂಪರ್ಕಕ್ಕೆ ಬಂದಿಲ್ಲ. ಬೆಳಗಾವಿಯಲ್ಲಿದ್ದ ಸುಜಾತ ಮೂರು ನಾಲ್ಕು ವರ್ಷದ ಹಿಂದೆ ಶಿವಮೊಗ್ಗದ ರಿಪ್ಪನ್ ಪೇಟೆಯ ತಮ್ಮಡಿಕೊಪ್ಪದಲ್ಲಿರುವ ತವರು ಮನೆಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಅಪರಿಚಿತ ಮೊಬೈಲ್ ಕರೆಯಿಂದ ಆಯನೂರು ಕೋಟೆ ಗ್ರಾಮದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಸಚಿನ್ ಸುಜಾತಳ ಸಂಪರ್ಕಕ್ಕೆ ಬಂದಿದ್ದ. ಸಂಪರ್ಕ ಸ್ನೇಹವಾಗಿ ಸಲುಗೆಗೆ ತಿರುಗಿದೆ. ಕಳೆದ ಒಂದು ವಾರದಿಂದ ಸುಜಾತಳ ಜೊತೆ ಬಂದು ವಾಸವಾಗಿದ್ದ. ಕಲ್ಮನೆಯಲ್ಲಿದ್ದ ಸುಜಾತಳ ಸಹೋದರಿ ಗೀತಾ ಎಂಬುವವರು ರಿಪ್ಪನ್ ಪೇಟೆಯಲ್ಲಿ ತಮ್ಮ ಮಕ್ಕಳು ಶಾಲೆಗೆ ಸೇರಿಸಲು ಬಂದಿದ್ದರು. ಆಗ ರೆಡ್ ಹ್ಯಾಂಡ್ ಆಗಿ ಪತ್ತೆಯಾಗಿದ್ದ ಸಚಿನ್ ಗೆ ಬುದ್ದಿವಾದ ಹೇಳಲಾಗಿತ್ತು. ಬುದ್ದಿವಾದ ಹೇಳಿ ಸಹೋದರಿ ಇತ್ತ ಬರುತ್ತಿದ್ದಂತೆ ನಿನ್ನೆ ಬೆಳಿಗ್ಗೆ ಸುಜಾತ ಮತ್ತು ಸಚಿನ್ ಕಳೆ ನಾಶಕವನ್ನ ಕುಡಿದಿದ್ದಾರೆ.
ಸಚಿನ್ ಸುಜಾತಳಿಗೆ ಬಲವಂತವಾಗಿ ವಿಷ ಕುಡಿಸಿ ಸಾಯಿಸಿರುವುದಾಗಿ ಸುಜಾತಳ ಕುಟುಂಬ ಆರೋಪಿಸಿದೆ. ಸಚಿನ್ ಸುಜಾತಳಿಗೆ ಬಲವಂತವಾಗಿ ವಿಷ ಕುಡಿಸಿ ಕೊಲೆಗೈದು ಆ ನಂತರ ಆತ ವಿಷ ಕುಡಿದಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 11-50 ಕ್ಕೆ ಮೆಗ್ಗಾನ್ ನಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post