ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಚುಂಚಾದ್ರಿ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಹಾಗೂ ಮಾನವ ಹಕ್ಕುಗಳ ಕಮಿಟಿ ಪ್ರಧಾನ ಕಾರ್ಯದರ್ಶಿ ಶಾರದಾ ಶೇಷಗಿರಿ ಗೌಡ, ಮಾನವ ಹಕ್ಕುಗಳ ಕಮಿಟಿ ಗೌರವಾಧ್ಯಕ್ಷ ಎಸ್. ರಮೇಶ್ ಅವರು ದಿನಪತ್ರಿಕೆ ವಿತರಕರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡಿದ್ದು, ಶಿವಮೊಗ್ಗ ಪೊಲೀಸ್ ಚೌಕಿಯಲ್ಲಿ ವಿನೋಬನಗರ ಎಸ್‌ಐ ಉಮೇಶ್ ಕುಮಾರ್ ಹಾಗೂ ಸಿಇಎನ್ ಎಸ್‌ಐ ಸತೀಶ್ ನಾಯ್ಕ್ ಅವರು ಇಂದು ಬೆಳಿಗ್ಗೆ ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಕಮಿಟಿಯ ಕೆ.ನಾಗರಾಜ್, ಎಸ್.ಕೆ. ಗಜೇಂದ್ರ ಸ್ವಾಮಿ, ಆಟೋರವಿ, ಆರ್. ಅಭಿನಂದನ್, ಅರುಣ್, ಮಂಜುನಾಥ್, ರಾಕೇಶ್ ಹಾಗೂ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















