ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಜನಾ ಪರಿಷತ್, ಶಿವಮೊಗ್ಗ ನಗರದ ಭಜನಾ ಮಂಡಳಿಗಳ ಒಕ್ಕೂಟ, ಅರ್ಚಕ ವೃಂದ, ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಹಾಗೂ ಸಂಸ್ಕಾರ ಪ್ರತಿಷ್ಠಾನ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮೇ 17ರಂದು ಶತ ಕೋಟಿ ಓಂ ನಮಃ ಶಿವಾಯ ಜಪ ಮಂಗಳೋತ್ಸವ ಹಾಗೂ ಲೋಕಕಲ್ಯಾಣಾರ್ಥ 3ನೇ ವರ್ಷದ ಸಾಮೂಹಿಕ ರುದ್ರಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 7ಕ್ಕೆ ಗಣಪತಿ ಪೂಜೆ, ಗೋಪೂಜೆ, ಗುರುವಂದನಾ, ಸ್ವಸ್ತಿ ಪುಣ್ಯಾಹ ವಾಚನ, ದೇವನಾಂದಿ, ಶ್ರೀ ಮಹಾಗಣಪತಿ ಹೋಮ, ರುದ್ರಹೋಮ,ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
10:30ಕ್ಕೆ ರವೀಂದ್ರ ನಗರ ಶ್ರೀಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನದಲ್ಲಿ ಭಜನಾ ಪರಿಷತ್ ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಆಶ್ರಯದಲ್ಲಿ ನಡೆದ ಶತಕೋಟಿ ಓಂ ನಮಃ ಶಿವಾಯ ಜಪಯಜ್ಞದ ಮಂಗಲೋತ್ಸವ ಹಾಗೂ ರುದ್ರಹೋಮದ ಮಹಾ ಪೂರ್ಣಾಹುತಿ ನಡೆಯಲಿದೆ.
ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಪೀಠಾಧೀಶರು ಶ್ರೀಕ್ಷೇತ್ರ ಹರಿಹರಪುರ ಪರಮ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರು ಆಗಮಿಸಿ ದಿವ್ಯ ಸಾನಿಧ್ಯ ವಹಿಸಿ ಅನುಗ್ರಹ ಮತ್ತು ಆಶೀರ್ವಚನ ಮಾಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ವೇ| ಬ್ರ| ಶಂಕರನಾರಾಯಣ ಭಟ್ – 9844610858, ಶಬರೀಶ್ ಕಣ್ಣನ್ – 9964072793, ವೇ| ಬ್ರ| ಶ್ರೀಪತಿ ಭಟ್ – 9449699424, ವೇ| ಬ್ರ| ಶ್ರೀ ವಿನಾಯಕ ಬಾಯಾರಿ – 9900107397, ವೇl ಬ್ರ| ಸಂದೇಶ್ ಉಪಾಧ್ಯಾಯ – 9964597654, ಎನ್. ಶ್ರೀಧರ್ – 9448170417ರನ್ನು ಸಂಪರ್ಕಿಸಲು ಕೋರಲಾಗಿದೆ.
Also read: ಯಡಿಯೂರಪ್ಪನವರ ತೋಟದಲ್ಲಿ ಕಾಡು ಪ್ರಾಣಿ ಕೊಂದು ವಾಮಾಚಾರ ಶಂಕೆ: ದೂರು ದಾಖಲು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post