ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಾರ್ಕ್ ಬಡಾವಣೆಯಲ್ಲಿ ಆರಂಭಗೊಳ್ಳುತ್ತಿರುವ ಮಾತೃ ವಾತ್ಸಲ್ಯ-ಮದರ್ ಮತ್ತು ಬೇಬಿಕೇರ್ ಆಸ್ಪತ್ರೆಯ Mathru Vathsalya ಉದ್ಘಾಟನೆಯನ್ನು ಫೆ.4ರ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಬಿ.ಸಿ. ಪೃಥ್ವಿ Dr. B.C. Pruthvi ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಯಿ ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ಇದಾಗಿದ್ದು, 24×7 ತುರ್ತುಸೇವೆ ಲಭ್ಯವಿದೆ. ಮಕ್ಕಳ ತೀವ್ರ ನಿಗಾ ಘಟಕ, ನಾರ್ಮಲ್ ಡೆಲಿವರಿ, ಸಿಸೇರಿಯನ್ ಡೆಲಿವರಿ, ಗರ್ಭೀಣಿಯರ ಆಯ್ಕೆ, ನೋವು ರಹಿತ ಡೆಲಿವರಿ ಹಾಗೂ ಸುಸಜ್ಜಿತ ಆಫರೇಷನ್ ಥಿಯೆಟರ್, ಲೇಬರ್ ಥಿಯೇಟರ್, ಮಕ್ಕಳ ಶಸ್ತ್ರ ಚಿಕಿತ್ಸೆ, ಲ್ಯಾಪ್ರೋಸ್ಕೋಪಿಕ್ ಸರ್ಜರಿ, ವ್ಯಾಕ್ಸಿನೇಷನ್ ವ್ಯವಸ್ಥೆ, ಸೂಟ್ ಡೆಲಿವರಿ ವ್ಯವಸ್ಥೆ, ಡಿಲಕ್ಸ್ ಮತ್ತು ಸ್ಪೆಷಲ್ ವಾರ್ಡ್‍ಗಳ ವ್ಯವಸ್ಥೆ ಇರುತ್ತದೆ ಎಂದರು.

Also read: ಸಂಸತ್ತಿನಲ್ಲಿ ಭಾರೀ ಗದ್ದಲ ಎಬ್ಬಿಸಿದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ
ಇಂದಿನಿಂದಲೇ ಉಚಿತ ಓಪಿಡಿ ಇರುತ್ತದೆ. ನುರಿತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ , ಮಕ್ಕಳ ವೈದ್ಯರ ತಂಡ ಲಭ್ಯವಿರುತ್ತದೆ ಎಂದ ಅವರು, ಫೆ.4ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಹದ್ಯೋಗಿ ವೈದ್ಯ ಮಿತ್ರರು, ಹಿತೈಷಿಗಳು ಭೇಟಿ ಮಾಡಿ ನಮ್ಮ ಆತಿಥ್ಯವನ್ನು ಸ್ವೀಕರಿಸುವಂತೆ ಮನವಿ ಮಾಡಿಕೊಂಡರು.

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಸುಮ ಕೆ.ಎಂ. ಮಾತನಾಡಿ, ಚಾರಿಟಿ ಆಸ್ಪತ್ರೆಯಲ್ಲಿರುವ ಈ ಆಸ್ಪತ್ರೆಯನ್ನು ಸೇವಾ ಮನೋಭಾವುಳ್ಳ ಹಾಗೂ ಹೃದಯವಂತ ವೈದ್ಯರ ತಂಡ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲು ಸಿದ್ದವಿದೆ. ಬೇರೆ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಕಡಿಮೆ ಇದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post