ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಮ್ಯಾಕ್ಸ್ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರೋಗ್ಯ ಭಾಗ್ಯ ಯೋಜನೆಯಡಿಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ರಾಜ್ಯ ಪೊಲೀಸ್ ಇಲಾಖೆ, ಕರ್ನಾಟಕ ಸರ್ಕಾರಿ ನೌಕರರ(ವೈದ್ಯಕೀಯ ಹಾಜರಾತಿ) ನಿಯಮ 1963ರ ಪ್ರಕಾರ ಈ ಆಸ್ಪತ್ರೆಯು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಮ್ಯಾಕ್ಸ್ ಆಸ್ಪತ್ರೆಯನ್ನು ಆರೋಗ್ಯ ಭಾಗ್ಯ ಯೋಜನೆಯಡಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಮೈಸೂರಿನ ಆಸ್ಪತ್ರೆ:
ಇದೇ ಯೋಜನೆಯ ಅಡಿಯಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ಡಾ.ಅಗರ್ವಾಲ್ ಕಣ್ಣಿನ ಆಸ್ಪತ್ರೆಯನ್ನೂ ಸಹ ಸೇರ್ಪಡೆಗೊಳಿಸಲಾಗಿದೆ.
Also read: ಲೋಕಾಯುಕ್ತ ದಾಳಿ: ಪಿಡಬ್ಲ್ಯುಡಿ ಎಪ್.ಡಿ.ಸಿ ಮಹಾಂತೇಶಗೆ ನ್ಯಾಯಾಂಗ ಬಂಧನ
ಯಾರಿಗೆಲ್ಲಾ ಪ್ರಯೋಜನ?
ಇನ್ನು, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು, ಅವರ ಅವಲಂಭಿತರ ಮಕ್ಕಳು, ತಂದೆ-ತಾಯಿಯರು(ಲಿಪಿಕ ವರ್ಗದ ಸಿಬ್ಬಂದಿಗಳು ಸೇರಿ) ಸಿಜಿಎಚ್’ಎಸ್ ದರದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post