ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತದ ತುರ್ತುಪರಿಸ್ಥಿತಿಯ #Emergency Period ಕರಾಳ ಅಧ್ಯಾಯದ ಸಂಘರ್ಷಮಯ ಹೋರಾಟದ 50ವರ್ಷಗಳ ನೆನಪಿಗಾಗಿ ಶಿವಮೊಗ್ಗ ನಗರದ ಪದವಿಪೂರ್ವ ಕಾಲೇಜು ವಿಧ್ಯಾರ್ಥಿಗಳಿಗೆ ನಗರ ಮಟ್ಟದ ದೇಶಭಕ್ತಿ ಗೀತೆಯ #Patriotic Song ಸಮೂಹ ಗಾಯನ ಸ್ಪರ್ಧೆಯನ್ನು ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗು ಮಂಥನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಈ. ಕಾಂತೇಶ್ ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ಜುಲೈ 25ರಂದು ನಡೆಯಲಿರುವ ವಿಶೇಷ ಸಮಾರಂಭದಲ್ಲಿ ವಿಜೇತ ತಂಡಕ್ಕೆ ಪ್ರಥಮ, ದ್ವೀತಿಯ ಹಾಗು ತೃತೀಯ ಶ್ರೇಣಿಯಲ್ಲಿ ನಗದು ಬಹುಮಾನಗಳನ್ನು ನೀಡಲಾಗುವುದು.
ಇದೇ ಸಂದರ್ಭದಲ್ಲಿ ತುರ್ತುಪರಿಸ್ಥಿಯ ಸಮಯದಲ್ಲಿ ಮೀಸಾ ಕಾಯ್ದೆಯಡಿ ಸೆರೆಮನೆಯ ಶಿಕ್ಷೆಯನ್ನು ಅನುಭವಿಸಿದ ಶಿವಮೊಗ್ಗ ನಗರದ ಹಿರಿಯರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು ಎಂದರು.
ದೇಶಭಕ್ತಿ ಗೀತೆಯ ಸಮೂಹ ಗಾಯನದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳು ಉಮೇಶ್ ಆರಾಧ್ಯ (98861 77311), ಹರೀಶ್ ಕಾರ್ಣಿಕ್ (94481 06690) ಅಥವಾ ವಿನಯ್ ಶಿವಮೊಗ್ಗ (8310876277) ಇವರನ್ನು ಸಂಪರ್ಕಿಸಿ ಹೆಸರನ್ನು ನೊಂದಾಯಿಸಬಹುದು ಎಂದು ತಿಳಿಸಿದ್ದಾರೆ.
ನಿಬಂಧನೆಗಳು ಹೀಗಿವೆ:
- ಒಂದು ತಂಡದಲ್ಲಿ ಕನಿಷ್ಠ 6 ಹಾಗೂ ಗರಿಷ್ಠ 10 ವಿದ್ಯಾರ್ಥಿಗಳಿರಬಹುದು
- ಒಂದು ಕಾಲೇಜಿನಿಂದ 2 ತಂಡಗಳು ಭಾಗವಹಿಸಬಹುದು
- ಸಿನಿಮಾ ಗೀತೆಯನ್ನು ಹಾಡುವಂತಿಲ್ಲ ಹಾಗೂ ಕೆರೋಕೆ ಬಳಸುವಂತಿಲ್ಲ
- ದೇಶ ಭಕ್ತಿಗೀತೆಯನ್ನು ಮಾತ್ರ ಹಾಡಬೇಕು
- ತೀರ್ಪುಗಾರರ ನಿರ್ಣಯವೇ ಅಂತಿಮ
- ಹೆಸರು ನೋಂದಾಯಿಸಲು 14/07/2025 ಅಂತಿಮ ದಿನವಾಗಿರುತ್ತದೆ
- ಸಾಮೂಹಿಕ ದೇಶಭಕ್ತಿಗೀತೆ ಗಾಯನ ಸ್ಪರ್ಧೆ 19/07/2025ರ ಶನಿವಾರದಂದು ನಡೆಯಲಿದೆ
- ಸ್ಪರ್ಧೆ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post