ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನಸಿಗ ಅಸ್ವಸ್ಥನೋರ್ವ ಆಸ್ಪತ್ರೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರಿ ಗ್ರಾಮದ ಶ್ರೀನಿವಾಸ್ ಮೃತಪಟ್ಟವರಾಗಿದ್ದು, ಕಳೆದ 20 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದ ಇವರು, ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಎನ್ನಲಾಗಿದೆ.
ಸಹೋದರ ತಿಂಡಿ ತರಲು ಹೊರಗೆ ಹೋದಾಗ ಶ್ರೀನಿವಾಸ್ ಮೇಲೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Also read: ಮತ್ತೆ ಮುನ್ನೆಲೆಗೆ ಸಿಡಿ ಬಹಿರಂಗ ವಿಚಾರ: ಯಡಿಯೂರಪ್ಪ ಹೇಳಿದ್ದೇನು?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















