ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಸರ್ಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಮೇರಿ ಮಾಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯು Meri Maati Mera Desh Amruth Kalasha Yathre ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಅದ್ದೂರಿಯಾಗಿ/ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಜಿಲ್ಲೆಯ 7 ತಾಲ್ಲೂಕಿನಿಂದ ಸಂಗ್ರಹಿಸಿರುವ ಮಣ್ಣಿನ ಅಮೃತ ಕಳಶಕ್ಕೆ ನೆಹರು ಯುವ ಕೇಂದ್ರದಲ್ಲಿ ಪೂಜಿಸಿ, ಯುವ ಕಾರ್ಯಕರ್ತರ ತಂಡಕ್ಕೆ ಶುಭ ಹಾರೈಸಿ ನವದೆಹಲಿಗೆ ಬೀಳ್ಕೊಡಲಾಯಿತು. ಶಿವಮೊಗ್ಗ ಜಿಲ್ಲೆಯಿಂದ ಹೊರಟು ಬೆಂಗಳೂರಿಗೆ ತೆರಳಿ ಇಂದು ನಡೆದ ರಾಜ್ಯ ಮಟ್ಟದ ಅಮೃತಕಳಶ ಯಾತ್ರೆಯಲ್ಲಿ ಪಾಲ್ಗೊಂಡು, ನಂತರ ಮಧ್ಯಾಹ್ನ ವಿಶೇಷ ರೈಲಿನ ಮೂಲಕ ನವದೆಹಲಿಗೆ ತೆರಳಿದರು.
ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಬೀಳ್ಕೊಡುಗೆಯ ಸಂದರ್ಭದಲ್ಲಿ ಕಾರ್ಯಕ್ರಮ ಕುರಿತಾಗಿ ಜಿಲ್ಲೆಯ ಯುವಕರಿಗೆ ಉತ್ತಮ ಅವಕಾಶವಾಗಿದ್ದು, ಕಾರ್ಯಕ್ರಮದಲ್ಲಿ ಯುವಕ/ಯುವತಿಯರು ಭಾಗವಹಿಸುತ್ತಿರುವುದು ಜಿಲ್ಲೆಯ ಯುವಜನರಿಗೆ ಆದರ್ಶವಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ಒಟ್ಟು 34 ಯುವಕ/ಯುವತಿಯರು ತೆರಳುತ್ತಿದ್ದು, ಅ.30, 31ರಂದು ದೆಹಲಿಯ ಕರ್ತವ್ಯಪಥ್‍ನಲ್ಲಿ ನಡೆಯಲಿರುವ ಬೃಹತ್ ಅಮೃತ ಕಳಶದ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
Also read: ವಿಐಎಸ್‌ಎಲ್ ಉಳಿವಿಗಾಗಿ ವಿನಾಯಕ ಮೂರ್ತಿ ಪ್ರತಿಷ್ಠಾಪನೆ: ವಿಶೇಷ ಪೂಜೆ ಸಲ್ಲಿಕೆ
ಈ ಅಮೃತ ಕಳಶದ ಮಣ್ಣಿನಲ್ಲಿ ಅಮೃತ ವಾಟಿಕಾ(ಉದ್ಯಾನವನ) ಹಾಗೂ ಆಜಾದಿ ಕಾ ಅಮೃತ ಮಹೋತ್ಸವ ಸ್ಮಾರಕವನ್ನು ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ.ನಾಗರಾಜ ಪರಿಸರ, ಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಕುವೆಂಪು ವಿಶ್ವವಿದ್ಯಾಲಯ, ಭದ್ರಾವತಿ ಪಟ್ಟಣ ಪಂಚಾಯತ್‍ನ ಸತೀಶ್, ನೆ.ಯು.ಕೇಂದ್ರದ ಲೆಕ್ಕಾಧಿಕಾರಿ ರಮೇಶ್, ರಾಷ್ಟ್ರೀಯ ಯುವ ಕಾರ್ಯಕರ್ತರು, ಇನ್ನಿತರರು ಹಾಜರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















