ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪತ್ರಕರ್ತ ಹಾಗು ಛಾಯಾಗ್ರಾಹಕ ಕೆ ನಾಗರಾಜ್ ಶೆಣೈ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವಾರ್ಷಿಕ ದತ್ತಿ ಪ್ರಶಸ್ತಿ ಮಿಂಚು ಶ್ರೀನಿವಾಸ್ ಪ್ರಶಸ್ತಿ ಯನ್ನು ಇಂದು ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯು 5 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಗೌರವಾಧಾರಗಳನ್ನು ಒಳಗೊಂಡಿದೆ. ಇದೇ ಸಂದರ್ಭದಲ್ಲಿ ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ ಆರ್.ಎನ್.ಸಿದ್ಧಲಿಂಗ ಸ್ವಾಮಿ, ಹಿರಿಯ ಪತ್ರಕರ್ತ, ಚಾಮರಾಜನಗರ ಜಿಲ್ಲೆ. ಎಂ.ನಾಗೇಂದ್ರರಾವ್ ಪ್ರಶಸ್ತಿಯನ್ನು ಡಾ.ಉಳ್ಳಿಯಡ ಎಂ. ಪೂವಯ್ಯ, ಸಂಪಾದಕರು, ಬ್ರಹ್ಮಗಿರಿ ಕೊಡವ ಪತ್ರಿಕೆ, ಮಡಿಕೇರಿ. ಇವರಿಗೆ ನೀಡಲಾಯಿತು. ಉಳಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.

ಸಂವಿಧಾನದ ಓದು ಅವರ ಕಾರ್ಯಕ್ಷಮತೆ ಯನ್ನು ಹೆಚ್ವಿಸುತ್ತದೆ. ಸಂವಿಧಾನದ ದ ಬಗ್ಗೆ ಅಪಸ್ವರ ಸಲ್ಲದು. ಅಪವಾಖ್ಯನ ಮಾಡಬಾರದು. ಸಂವಿಧಾನದ ಮೂಲತತ್ವಗಳನ್ನು ತಿದ್ದಲು ಸಾದ್ಯವಿಲ್ಲ ಎಂಬುದನ್ನು ಮನಗಾಣ ಬೇಕು. ಹಾಗೂ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗಗಳು ಆಡಳಿತ ಸರ್ಕಾರದ ಕೈ ಗೊಂಬೆಗಳಾಗಿರುವುದು ದುರಂತ ಎಂದರು.
ಕಾರ್ಯಕ್ರಮದಲ್ಲಿ ಕೆ ಯೂ ಡ್ಬೂ ಜೆ ರಾಜ್ಯಾದ್ಯಕ್ಷ ಶಿವನಾಂದ್ ತಗಡೂರು ಮುಂತಾವರು ಇದ್ದರು.












Discussion about this post