ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತರಪ್ರದೇಶದ ಆಗ್ರಾದಲ್ಲಿ ಕಳೆದ ಶುಕ್ರವಾರ ತರಬೇತಿ ವೇಳೆ ಮರಣವನ್ನಪ್ಪಿದ ವಾಯುಪಡೆಯ ವಾರೆಂಟ್ ಆಫಿಸರ್ ದಿ. ಜಿ.ಎಸ್ ಮಂಜುನಾಥ್ (36) #Airforce Officer Late. Manjunath ಅವರ ನಿವಾಸಕ್ಕೆ ಸಚಿವ ಮಧು ಬಂಗಾರಪ್ಪ #Minister Madhu Bangarappa ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ವಾಯುಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದ ಮಂಜುನಾಥ್ ಅವರ ಅಕಾಲಿಕ ಮರಣ ಅತ್ಯಂತ ನೋವಿನ ಸಂಗತಿಯಾಗಿದ್ದು, ಭಗವಂತನು ಕುಟುಂಬ ವರ್ಗಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ವಾಯುಸೇನೆಯ ಈ ಹೆಮ್ಮೆಯ ಅಧಿಕಾರಿ ಸದಾ ನಮ್ಮೆಲ್ಲರ ಚಿರಸ್ಮರಣೆಯಲ್ಲಿರುತ್ತಾರೆ. ಅವರ ಕುಟುಂಬ ಸದಸ್ಯರ ಜೊತೆಗೆ ನಾವಿದ್ದೇವೆ ಎಂದು ಧೈರ್ಯದ ಭರವಸೆ ನೀಡಿದರು.
Also read: ಶಾಸಕ ಸಂಗಮೇಶ್ ಪುತ್ರರ ದೌರ್ಜನ್ಯ ಮಿತಿ ಮೀರಿದೆ: ಶಾರದಾ ಅಪ್ಪಾಜಿ
ಸ್ಥಳೀಯ ಗ್ರಾಮಸ್ಥರು ಮಂಜುನಾಥ್ ಅವರ ಶಾಶ್ವತ ನೆನಪಿಗಾಗಿ ಗ್ರಾಮದಲ್ಲಿ ಪುತ್ಥಳಿ ನಿರ್ಮಾಣ ಹಾಗೂ ವಿದ್ಯಾಬ್ಯಾಸ ಮಾಡಿದ ಶಾಲಾ ಅಭಿವೃದ್ಧಿ ಹಾಗೂ ನೂತನ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post