ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಧಾನಿ ನರೇಂದ್ರ ಮೋದಿ #PM Narendra Modi ಮತ್ತು ದೀನದಯಾಳ್ ಉಪಾಧ್ಯರವರ ಜನ್ಮದಿನದ ಅಂಗವಾಗಿ ಸೆ.17ರಿಂದ ಅ.2ರ ವರೆಗೆ ಬಿಜೆಪಿ ವಿವಿಧ ಮೋರ್ಚಾಗಳ ವತಿಯಿಂದ ಹಮ್ಮಿಕೊಂಡಿದ್ದ ಸೇವಾಪಾಕ್ಷಿಕದ ಅಂಗವಾಗಿ ಕಾರ್ಯಕರ್ತರು ಸಮಾಜಮುಖಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ಪ್ರಧಾನಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಲಹೆ ಮೇರೆಗೆ ಹಮ್ಮಿಕೊಂಡಿರುವ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ದೇಶದಾದ್ಯಂತ ಅತ್ಯಂತ ಯಶಸ್ವಿಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದರು.
ಅವರು ಇಂದು ನಗರದ ಸೀನಪ್ಪಶೆಟ್ಟಿ ವೃತ್ತದಲ್ಲಿ (ಗೋಪಿವೃತ್ತ) ಬಿಜೆಪಿ ಶಿವಮೊಗ್ಗ ನಗರ ಮತ್ತು ಬಿಜೆಪಿ ಹಿಂದುಳಿದ ವರ್ಗಗಳ ವತಿಯಿಂದ ಸೇವಾಪಾಕ್ಷಿಕದ ಅಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪ್ರದರ್ಶಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2000 ರೂ.ಗಳನ್ನು ಗ್ಯಾರೆಂಟಿ ಎಂದು ನೀಡಿ ಇನ್ನೊಂದು ಕಡೆಯಿಂದ ಅಗತ್ಯ ವಸ್ತುಗಳ ಮತ್ತು ಅಗತ್ಯ ಸೇವೆಗಳ ದರಗಳನ್ನು ಏರಿಸುತ್ತಾ ಬಡವರಿಗೆ ಅನ್ಯಾಯ ಮಾಡುವ ಕೆಲಸ ಕಾಂಗ್ರೆಸ್ ಮಾಡಿದೆ. ಆದರೆ ಎನ್‍ಡಿಎ ನೇತೃತ್ವದ ಕೇಂದ್ರ ಸರ್ಕಾರ `ಸಬ್ ಸಾತ್ ಸಬ್ ಕ ವಿಕಾಸ್’ ಮಾಡುತ್ತಾ ಜಗತ್ತಿನ ನಾಲ್ಕನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ, ಸ್ವಾವಲಂಬಿ ಭಾರತವಾಗಿ ವಿಶ್ವದ ಗಮನ ಸೆಳೆದಿದೆ. ಪಂಡಿತ್ ದೀನ್‍ದಯಾಳ್ ಜೀರವರ ಪರಿಕಲ್ಪನೆ ಕಟ್ಟಕಡೆಯ ವ್ಯಕ್ತಿಗೂ ಕೂಡ ಮೂಲಭೂತ ಸೌಲಭ್ಯ ಸಿಗಬೇಕು ಎಂಬುದಾಗಿದ್ದು, ಅದನ್ನು ಮೋದಿ ಸರ್ಕಾರ ಸದ್ಧಿಲ್ಲದೆ ನಡೆಸುತ್ತಾ ಬಂದಿದೆ. ಆರೋಗ್ಯವಿಮೆ, ಕೃಷಿಸಮ್ಮಾನ್, ಮುದ್ರಾ ಯೋಜನೆ, ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲ, ಸ್ವಚ್ಛಭಾರತ್‍ದ, ಗ್ರಾಮೀಣ ರಸ್ತೆಗಳು, ಶೌಚಾಲಯಗಳು ಸೇರಿದಂತೆ ನೂರಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಆದರೂ ಏನೂ ಮಾಡದೇ ಇದ್ದವರು ದೊಡ್ಡ ದೊಡ್ಡ ಭಾಷಣ ಮಾಡಿ ಜನರಿಗೆ ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದರು.

ಭಾರತವನ್ನು ಕಟ್ಟಿಹಾಕುವ ಷಡ್ಯಂತ್ರ ವಿವಿಧ ದೇಶಗಳು ಮಾಡುತ್ತಿವೆ. ಎಲ್ಲಾ ಸಂಕಷ್ಟಗಳನ್ನು ದಾಟಿ ಮೋದಿ ಸರ್ಕಾರ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ನಗರಾಧ್ಯಕ್ಷ ಮೋಹನ್‍ರೆಡ್ಡಿ ಪ್ರಮುಖರಾದ ಮಾಲ್ತೇಶ್, ಮಂಜುನಾಥ್, ದೀನ್‍ದಯಾಳ್, ಪ್ರದೀಪ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post