ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆ ಸದಸ್ಯನಾಗಲು ನಂತರ ವಿಧಾನ ಸಭಾ ಸದಸ್ಯನಾಗಲು ವಿನೋಬನಗರ ನಿವಾಸಿಗಳ ಸಹಕಾರ ಹಾಗೂ ಶಿವಾಲಯ ಈಶ್ವರನ ಆಶೀರ್ವಾದ ಕಾರಣ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ MLA Channabasappa ಹೇಳಿದರು.
ವಿನೋಬನಗರ ಶಿವಾಲಯದಲ್ಲಿ ಶಿವಾಲಯ ವೀರಶೈವ ಸಮಿತಿಯ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿ, ಇಲ್ಲಿನ ಸಮಿತಿಯವರು ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇವಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ಹೆಚ್ಚುವರಿ ಸ್ಥಳವನ್ನು ಕಮಿಟಿ ವತಿಯಿಂದ ಕೋರಿದ್ದರು. ಈ ನಿಟ್ಟಿನಲ್ಲಿ ಸ್ಥಳ ಕೊಡಿಸುವಲ್ಲಿ ಸರ್ಕಾರದ ಜೊತೆ ಪ್ರಯತ್ನ ನಡೆಸವುದಾಗಿ ಹೇಳಿದರು.
ನಮ್ಮ ಹಿಂದೂ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕು. ಮುಂದಿನ ಪೀಳಿಗೆಗೆ ಕಲಿಸಬೇಕು. ಇದು ಪುಣ್ಯ ಸ್ಥಳ. ಅನೇಕ ಜಗದ್ಗುರುಗಳು, ಸಾಧು ಸಂತರು ಬಂದು ಆಶೀರ್ವಾದ ನೀಡಿದಂತಹ ಪುಣ್ಯಕ್ಷೇತ್ರ ಎಂದರು.
ಈ ಸಂದರ್ಭದಲ್ಲಿ ಪಿ.ಹೆಚ್.ಡಿ. ಪಡೆದ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿವಾಲಯ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿಗಳು, ಪ್ರಧಾನ ಕಾರ್ಯದರ್ಶಿ ಮುರುಗೇಶ್ ಕೂಸ್ನೂರ್, ಸಹ ಕಾರ್ಯದರ್ಶಿ ಮಹೇಶ, ಪ್ರಧಾನ ಅರ್ಚಕ ರುದ್ರಯ್ಯ, ವಿನಯ್ ರಾಜು, ಪುಟ್ಟಯ್ಯ, ನಾಗರಾಜ್, ಚಂದ್ರಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post