ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪ್ರತಿವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮುಂಗಾರು ಆರಂಭದಲ್ಲೇ ಚುರುಕುಗೊಂಡಿದ್ದು, ವಾಡಿಕೆಗಿಂತಲೂ ಹೆಚ್ಚಾಗಿಯೇ ಹಲವು ಕಡೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.
ಪ್ರಮುಖವಾಗಿ, ಹೊಸನಗರ ತಾಲೂಕಿನಲ್ಲಿ ಜೂನ್ 18ರ ಇಂದಿನವರೆಗೂ 1,329.10 ಎಂಎಂ ಮಳೆಯಾಗಿದೆ. ದಾಖಲೆಗಳಂತೆ ವಾಡಿಕೆ ಮಳೆ 680.10 ಎಂಎಂ ಇದ್ದು, ಕಳೆದ ವರ್ಷ 590.20 ಎಂಎಂ ಮಳೆಯಾಗಿತ್ತು. ಇದರಂತೆ ತಾಲೂಕಿನಲ್ಲಿ ವಾಡಿಕೆಗಿಂತಲೂ ಬಹುತೇಕ ದುಪ್ಪಟ್ಟು ಮಳೆಯಾಗಿದೆ.
ಇನ್ನು, ಇಂದಿನವರೆಗೂ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 217.20 ಎಂಎಂ ಮಳೆಯಾಗಿದ್ದು, ಭದ್ರಾ ವ್ಯಾಪ್ತಿಯಲ್ಲಿ 33.40 ಎಂಎಂ ಮಳೆಯಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆ:
ಶಿವಮೊಗ್ಗ: 99.20 ಎಂಎಂ
ಭದ್ರಾವತಿ: 99 ಎಂಎಂ
ತೀರ್ಥಹಳ್ಳಿ 440.30 ಎಂಎಂ
ಸಾಗರ 314 ಎಂಎಂ
ಶಿಕಾರಿಪುರ 125.20 ಎಂಎಂ
ಸೊರಬ 264.10 ಎಂಎಂ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post