ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ.ರಾಘವೇಂದ್ರ #MP B.Y. Raghavendra ಅವರು ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು #CM Basavaraja Bommai ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಈ ಕೆಳಕಂಡ ವಿವಿಧ ಅಭಿವೃದ್ಧಿ ಪ್ರಸ್ತಾವನೆಗಳ ಮಂಜೂರಾತಿಗೆ ವಿನಂತಿಸಿದರು.
ಪ್ರಸ್ತಾವನೆಯಲ್ಲಿರುವ ಕೋರಿಕೆಗಳು:
- ಶಿವಮೊಗ್ಗ ವಿಮಾನ ನಿಲ್ದಾಣದ #Shivamogga Airport ಕಾಮಗಾರಿಯು ಸಪ್ಟೆಂಬರ್- 2022ರ ಅಂತ್ಯದ ಒಳಗೆ ಮುಕ್ತಾಯವಾಗಲಿದ್ದು, ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ) ವತಿಯಿಂದ ಕೈಗೊಳ್ಳಲು ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಯಾನ ಮಾರ್ಗಗಳನ್ನು ನಿಗದಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿ ಮಾನ್ಯ ಕೇಂದ್ರ ವಿಮಾನಯಾನ ಸಚಿವರಿಗೆ ಅಗತ್ಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಸಲ್ಲಿಸಲು ಕೋರಿದರು.
- ಶಿವಮೊಗ್ಗ-ದಾವಣಗೆರೆ & ಚಿತ್ರದುರ್ಗ ಹಾಲು ಒಕ್ಕೂಟ (ಶಿಮೂಲ್) ವ್ಯಾಪ್ತಿಯಿಂದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಬೇರ್ಪಡಿಸಿ ಹೊಸದಾಗಿ ಶಿವಮೊಗ್ಗ ಹಾಲು ಒಕ್ಕೂಟವನ್ನು ಪ್ರತ್ಯೇಕವಾಗಿ ಘೋಷಿಸಲು ವಿನಂತಿಸಿದರು.
- ಶಿವಮೊಗ್ಗ-ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದಲ್ಲಿ (ಶಿಮೂಲ್ನಲ್ಲಿ) ಹಾಲಿನ ಪುಡಿ ತಯಾರಿಕಾ ಘಟಕವನ್ನು ಪ್ರಾರಂಭಿಸಲು ಆಯವ್ಯಯದಲ್ಲಿ ಘೋಷಣೆ ಮಾಡಿ ರೂ.50.00 ಕೋಟಿ ಅನುದಾನ ಮೀಸಲಿಡಲು ಕೋರಿದರು.
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಶೋಧನಾ, ಕೌಶಲ್ಯಾಭಿವೃದ್ಧಿ ಮತ್ತು ವಿಸ್ತರಣಾ ಕೇಂದ್ರ, ಉಡುಗಣಿ (ಉಡುತಡಿ), ಶಿಕಾರಿಪುರ ತಾಲ್ಲೂಕು ಇದಕ್ಕೆ ರೂ.30.00 ಕೋಟಿ ವಿಶೇಷ ಅನುದಾನ ಮೀಸಲಿಡಲು ಕೋರಿದರು.
- ಶಿವಮೊಗ್ಗದಲ್ಲಿ ನೂತನವಾಗಿ ಸ್ಥಾಪನೆ ಆಗಿರುವ ಆಯುಷ್ ವಿಶ್ವವಿದ್ಯಾನಿಲಯ ಅಭಿವೃದ್ಧಿಗೆ ರೂ.100 ಕೋಟಿಗಳ ಅನುದಾನ ಮೀಸಲಿಟ್ಟು ಆಯ-ವ್ಯಯದಲ್ಲಿ ಘೋಷಣೆ ಮಾಡಲು ಕೋರಿದರು.
- ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ #SIMS ಮೆಗ್ಗಾನ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಕ್ಕೆ ರೂ.30.00 ಕೋಟಿಗಳ ಅನುದಾನ ಒದಗಿಸಲು ಕೋರಿದರು.
Also read: ಉಕ್ರೇನ್‌ನಿಂದ ರೊಮೇನಿಯಾ ತಲುಪಿದ 470ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು
- ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇದರ ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ನೂತನವಾಗಿ ಆರಂಭವಾಗಿರುವ ಕ್ಯಾಂಪಸ್ನ ಮೂಲಸೌಲಭ್ಯ ಅಭಿವೃದ್ಧಿಗೆ ರೂ.100.00 ಕೋಟಿಗಳ ಅನುದಾನ ಒದಗಿಸಲು ಕೋರಿದರು.
- ಕೇಂದ್ರದ ಪ್ರಾಯೋಜಕತ್ವದ ಎನ್.ಎಸ್.ಡಿ.ಎಫ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿದ್ದು ಇದಕ್ಕಾಗಿ ರೂ.20.00 ಕೋಟಿಗಳ ಅನುದಾನವನ್ನು ಒದಗಿಸಲು ಕೋರಿದರು.
Also read: ಧರ್ಮಸ್ಥಳ ದಿನೇಶ್ ಹತ್ಯೆ ಖಂಡನೀಯ, ಕುಟುಂಬದ ರಕ್ಷಣೆಗೆ ಸಿದ್ಧರಾಮಯ್ಯ ಆಗ್ರಹ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post