ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿಗೆ ಸಮೀಪದ ಕುಂಚೇನಹಳ್ಳಿ ಬಳಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ತೆರಳುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಷಾತ್ ಕಾರಿನಲ್ಲಿದ್ದ ಎಲ್ಲರೂ ಅಪಾತದಿಂದ ಪಾರಾಗಿದ್ದಾರೆ.
ಸಂಸದ ರಾಘವೇಂದ್ರ ಅವರು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮಾರ್ಗದಲ್ಲಿ ಕುಂಚೇನಹಳ್ಳಿ ಬಳಿಯಲ್ಲಿ ಘಟನೆ ಸಂಭವಿಸಿದೆ.
ಸಂಸದರ ಕಾರಿನ ಹಿಂದಿನಿಂದ ವೇಗವಾಗಿ ಬಂದ ಬೊಲೇರೋ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಜಖಂಗೊಂಡಿವೆ.
ಅದೃಷ್ಟವಷಾತ್ ಸಂಸದರು, ಕಚೇರಿ ಸಿಬ್ಬಂದಿ ಸೇರಿ ಕಾರಿನಲ್ಲಿದ್ದವರು ಯಾರಿಗೂ ಸಹ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಘಟನೆ ನಂತರ ಎಸ್ಕಾರ್ಟ್ ವಾಹನದಲ್ಲೇ ಸಂಸದರು ವಿಮಾನ ನಿಲ್ದಾಣಕ್ಕೆ ಪ್ರಯಾಣ ಮುಂದುವರೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















