ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಇಂದು ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ #B Y Raghavendra ಅವರು ಮುಂಜಾನೆಯಿಂದಲೇ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಮ್ಮ ಕುಟುಂಬದ ಆರಾಧ್ಯ ದೈವ ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯಕ್ಕೆ #Shri Huchurayaswamy Temple ತಮ್ಮ ಪತ್ನಿ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಆನಂತರ, ಶಿಕಾರಿಪುರ ತಾಲೂಕು ಮುಗುಳುಗೆರೆ ಗ್ರಾಮದಲ್ಲಿರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ದಂಪತಿ ಸಮೇತ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು.

Also read: ಮೋದಿ ಹೆಸರಲ್ಲಿ ಗೆದ್ದು ಈ ವಿಚಾರಕ್ಕಾಗಿ ಅವರಲ್ಲಿ ಒತ್ತಾಯಿಸಿ: ಪ್ರಮೋದ್ ಮುತಾಲಿಕ್ ಹೇಳಿದ್ದೇನು?
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ರುದ್ರೇಗೌಡ, ಪ್ರಮುಖರಾದ ಹನುಮಂತಪ್ಪ, ಗುರುಮೂರ್ತಿ, ಗಾಯತ್ರಿ ಮಲ್ಲಪ್ಪ, ಮಾಜಿ ರಾಘವೇಂದ್ರ, ಬಸವರಾಜ್, ವೀರಣ್ಣ, ಭದ್ರಾಪುರ ಹಾಲಪ್ಪ, ನಿವೇದಿತಾ, ಪ್ರವೀಣ್, ಸಿದ್ಧಲಿಂಗಪ್ಪ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post