ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಜ.20 ರಿಂದ ಮಾ.31ರವರೆಗೆ ಮುನ್ಸಿಪಲ್ ಪ್ರೀಮಿಯರ್ ಲೀಗ್-2023 ಅನ್ನು ಆಯೋಜಿಸಲಾಗಿದೆ.
ಸ್ವಾವಲಂಬನೆ, ಸುಸ್ಥಿರ ಸರ್ವತೋಮುಖ ಅಭಿವೃದ್ದಿಯ ಉದ್ದೇಶದಿಂದ ಈ ಲೀಗ್‍ನ್ನು ಆಯೋಜಿಸಿದ್ದು, ಕಂದಾಯ ಶಾಖೆ ಮತ್ತು ಆರೋಗ್ಯ ಶಾಖೆ (ಸ್ವಚ್ಚ ಭಾರತ ಮಿಷನ್) ಯಡಿ ಸ್ಥಳೀಯ ಸಂಸ್ಥೆಗಳ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿ ಅತ್ಯುತ್ತಮ ಬಿಲ್ ಕಲೆಕ್ಟರ್, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿ, ಅತ್ಯುತ್ತಮ ಕಿರಿಯ ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು, ಎಇಇ(ಪರಿಸರ), 14ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವ ಅಭಿಯಂತರರಿಗೆ ಅತ್ಯುತ್ತಮ ಜೆಇ, ಎಇ, ಎಇಇ, ಇಇ ಪ್ರಶಸ್ತಿಗಳನ್ನು ನೀಡಲಾಗುವುದು. ಈ ಪ್ರೀಮಿಯರ್ ಲೀಗ್‍ನಲ್ಲಿ ಮೊದಲನೇ ಬಹುಮಾನವಾಗಿ ಎಕ್ಸಲೆನ್ಸ್ ಅವಾರ್ಡ್, ಎರಡನೇ ಬಹುಮಾನ ಸ್ಟ್ಯಾಂಡ್ ಔಟ್ ಪರ್ಫಾರ್ಮರ್, ಮೂರನೇ ಬಹುಮಾನ ರೈಸಿಂಗ್ ಸ್ಟಾರ್ ಅವಾರ್ಡ್, ಕಂದಾಯ ಮತ್ತು ಆರೋಗ್ಯ ಶಾಖೆಯ ಸ್ಪರ್ಧೆಯಲ್ಲಿ ಪಡೆದಿರುವ ಶ್ರೇಯಾಂಕ ಹಾಗೂ 14ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕೈಗೊಂಡ ಎಲ್ಲಾ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ರೋಲಿಂಗ್ ಟ್ರೋಫಿ, ಕಂದಾಯ ಹಾಗೂ ಆರೋಗ್ಯ ಶಾಖೆಯ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗುವ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಲೀಡರ್‍ಶಿಪ್ ಅವಾರ್ಡ್ ಹಾಗೂ ಅತಿ ಹೆಚ್ಚು ಪ್ರತಿಶತ ಪ್ರಶಸ್ತಿ ಪಡೆದ ನಗರ ಸ್ಥಳೀಯ ಸಂಸ್ಥೆಗಳ ಜಿಲ್ಲೆಯ ಯೋಜನಾ ನಿರ್ದೇಶಕರುಗಳಿಗೆ ಅಪರ ಮುಖ್ಯ ಕಾರ್ಯದರ್ಶಿಗಲ ಮಾವೆರಿಕ್ ಅವಾರ್ಡ್ ನೀಡಲಾಗುವುದು. ಸ್ಥಳೀಯ ಸಂಸ್ಥೆವಾರು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡು ವಿವಿಧ ಕ್ರೀಡಾ ಪಂದ್ಯಾವಳಿಗಳನ್ನು ನಡೆಸಿ, ಜಿಲ್ಲಾ ಮಟ್ಟದಲ್ಲಿ ವಿಜೇತರಾಗುವ ತಂಡಗಳಿಗೆ ಜಿಲ್ಲಾ ಹಂತದಲ್ಲಿಯೇ ಪೌರಾಡಳಿತ ಸಚಿವರ ಪೌರಸ್ಟಾರ್ ಅವಾರ್ಡ್ ಹಾಗೂ ಅತೀ ಹೆಚ್ಚು ಪ್ರತಿಶತ ಪ್ರಶಸ್ತಿ ಪಡೆದ ನಗರ ಸ್ಥಳೀಯ ಸಂಸ್ಥೆಗಳ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಪಿನಾಕಲ್ ಪರ್ಫಾರ್ಮರ್ ಅವಾರ್ಡ್ ನೀಡಲಾಗುವುದು.
Discussion about this post