ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನ್ನ ಮಗ ಹೆಚ್.ಸಿ. ಯೋಗೇಶನಿಗೆ ನನ್ನ ಆಶೀರ್ವಾದವಿದೆ. ಆದರೆ ಮಾಜಿ ಶಾಸಕರ ಸಂಘದ ಅಧ್ಯಕ್ಷನಾಗಿ ಅವನ ಪರವಾಗಿ ನಾನು ಮತಯಾಚನೆ ಮಾಡುವುದಿಲ್ಲ. ಗೆಲ್ಲುವ ಭರವಸೆ ಇದೆ ಎಂದು ಹೆಚ್.ಎಂ. ಚಂದ್ರಶೇಖರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಶಾಸಕನಾಗಿದ್ದಾಗ ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ತುಂಗಾ ಅಣೆಕಟ್ಟು ನಿರ್ಮಾಣ, ಇಡೀ ನಗರಕ್ಕೆ ಕುಡಿಯುವ ನೀರಿನ ಯೋಜನೆ, ವಿದ್ಯುತ್ ಉತ್ಪಾದನೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಿವೇಶನ, ತುಂಗಾ ಸೇತುವೆ, ಮೆಗ್ಗಾನ್ ಆಸ್ಪತ್ರೆಯ ಅಭಿವೃದ್ಧಿ, ಹೊಸ ಪೊಲೀಸ್ ಸ್ಟೇಷನ್, ಶಿವಪ್ಪನಾಯಕ ಅರಮನೆಯ ಜೀರ್ಣೋದ್ಧಾರ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ನೀರು ಹೀಗೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.
ಈಗ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ನಾನು ಮಾಡಿದ ಅಭಿವೃದ್ಥಿಗಳನ್ನು ನೋಡಿದ್ದಾನೆ. ಅವನಿಗೆ ಮತದಾರರ ಮತ್ತು ನನ್ನ ಆಶೀರ್ವಾದ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಯ್ಯದ್ ಶಿವಣ್ಣ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















