ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು ಸ್ಯಾಂಡಲ್ ಬರೀ ರಾಜ್ಯ, ದೇಶ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳ ಜನರಿಗೂ ಚಿರಪರಿಚಿತ ಈ ಸೋಪು. ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ತಯಾರಾಗುವ ಇದು ಸಾಬೂನಿನ ಒಂದು ಬ್ರಾಂಡ್ ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗುವ ಜಗತ್ತಿನ ಏಕೈಕ ಸಾಬೂನಾಗಿ ಪ್ರಸಿದ್ಧವಾಗಿದೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ತಿಳಿಸಿದರು.
ನಗರದ ಸುಬ್ಬಯ್ಯ ಆಸ್ಪತ್ರೆ ಮುಂಭಾಗದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿಯ ಔಟ್ ಲೆಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗಷ್ಟೇ ಈ ಸಾಂಪ್ರದಾಯಿಕ ಸಾಬೂನು ಉತ್ಪಾದನೆಯಲ್ಲಿ 102 ವರ್ಷಗಳನ್ನು ಪೂರೈಸಿದೆ. ಭಾರತದಲ್ಲಿ ಸುಮಾರು 3 ಲಕ್ಷ ಪೌಂಡ್ ಗೂ ಹೆಚ್ಚಿನ ಪ್ರಮಾಣದ ಗಂಧದೆಣ್ಣೆ ತಯಾರಾಗುತ್ತದೆ. ಇಂದು ಉದ್ಘಾಟನೆಯಾಗುತ್ತಿರುವ ಮಳಿಗೆಯು ಕಂಪನಿಯ 5 ನೇ ಮಾರಾಟ ಮಳಿಗೆಯಾಗಿದೆ. ಇದು ನಮ್ಮ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆಯ ವಿಚಾರ. ಈ ಮಳಿಗೆಯು ಯಶಸ್ವಿಯಾಗಿ ಮುನ್ನಡೆಯಲೆಂದು ಶುಭ ಹಾರೈಸುತ್ತೇನೆ ಎಂದರು.
ಚೆನ್ನಗಿರಿ ಶಾಸಕ ಕೆ. ಮಡಳ್ ವಿರೂಪಾಕ್ಷಪ್ಪ, ಮಹೇಶ್ ಬಿ ಶಿರೂರ್, KSDLನ ಜನರಲ್ ಮ್ಯಾನೇಜರ್ ಸುವರ್ಣ ಕುಮಾರ್, ನಿರ್ದೇಶಕರಾದ ಮಲ್ಲಿಕಾರ್ಜುನ್ ಸವಕಾರ್, ನಿವೇದಿತಾ ರಾಜು, ಶಿವಕುಮಾರ್ ಹುಡೆದ್. ಪದ್ಮನಾಭ ಭಟ್ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post