ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಸಾಳು ಮತ್ತು ಕುಂಸಿ #Kumsi ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ #SouthWesternRailway ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಹಾಗೂ ಕುಂಸಿ ರೈಲು ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು #Mysore ಎಕ್ಸ್’ಪ್ರೆಸ್ ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲ್ಲುತ್ತದೆ.ರೈಲು ಸಂಖ್ಯೆ 16206/16205 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಲಾ 1 ನಿಮಿಷ ನಿಲ್ಲುತ್ತದೆ.
ಎಷ್ಟು ಅವಧಿಗೆ ನಿಲುಗಡೆ ವಿಸ್ತರಣೆ?
ಈ ನಿಲುಗಡೆಗಳು 24 ಆಗಸ್ಟ್ 2025ರಿಂದ 23 ಫೆಬ್ರವರಿ 2026ರವರೆಗೆ ಆರು ತಿಂಗಳ ಕಾಲ, ಈಗಿರುವ ಸಮಯಗಳಲ್ಲೇ ಜಾರಿಯಲ್ಲಿ ಇರುತ್ತವೆ.
ಈ ನಿಲುಗಡೆಯ ಮುಂದುವರಿಕೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಉತ್ತಮ ಸಂಪರ್ಕ ಹಾಗೂ ಅನುಕೂಲ ಕಲ್ಪಿಸುತ್ತದೆ.
ವಿಜಯಪುರ-ಮಂಗಳೂರು-ವಿಜಯಪುರ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಮಂಗಳೂರು: ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ಸೆಪ್ಟೆಂಬರ್’ನಿಂದ ನಿಯಮಿತ ಎಕ್ಸ್’ಪ್ರೆಸ್ ರೈಲಾಗಿ ಸಂಚಾರ ಮಾಡಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ರೈಲ್ವೆ ಮಂಡಳಿಯು ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್’ಪ್ರೆಸ್ ರೈಲನ್ನು (ರೈಲು ಸಂಖ್ಯೆ 07377/07378) ನಿಯಮಿತ ಎಕ್ಸ್’ಪ್ರೆಸ್ ಸೇವೆಗೆ ಉನ್ನತೀಕರಿಸಲು ಅನುಮೋದನೆ ನೀಡಿದೆ.
ಈ ರೈಲುಗಳು ಇನ್ನು ಮುಂದೆ ರೈಲು ಸಂಖ್ಯೆ 17377/17378 ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್’ಪ್ರೆಸ್ ಎಂದು ಸಂಚರಿಸಲಿವೆ.
ರೈಲು ಸಂಖ್ಯೆ 17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್’ಪ್ರೆಸ್ ತನ್ನ ನಿಯಮಿತ ಸೇವೆಯನ್ನು ಸೆಪ್ಟೆಂಬರ್ 1, 2025 ರಿಂದ ಪ್ರಾರಂಭಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್’ಪ್ರೆಸ್ ಸೆಪ್ಟೆಂಬರ್ 2, 2025 ರಿಂದ ತನ್ನ ಸಂಚಾರ ಆರಂಭಿಸಲಿದೆ. ಈ ಎರಡೂ ರೈಲುಗಳು ಈಗಿರುವ ವೇಳಾಪಟ್ಟಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ನಿರ್ವಹಣಾ ಮಾದರಿಯೊಂದಿಗೆ ಸಂಚರಿಸಲಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post