ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇದೇ ಪ್ರಪ್ರಥಮ ಬಾರಿಗೆ, ಮೈತ್ರಿ ಮೈ ಜುವೆಲ್ಸ್ ಚಿನ್ನದ ಮಳಿಗೆಯಲ್ಲಿ ಏರ್ಪಡಿಸಲಾಗಿದ್ದ ಆ್ಯಂಟಿಕ್ ಚಿನ್ನದ ಉತ್ಸವ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಇದೀಗ ಈ ಉತ್ಸವವನ್ನು ಮತ್ತಷ್ಟು ದಿನಗಳ ಕಾಲ ಮುಂದುವರೆಸಲಾಗುತ್ತಿದೆ.
ಆ. 28ರ ಭಾನುವಾರದವರೆಗೆ ಈ ಉತ್ಸವ ಮುಂದುವರೆಸಲಾಗುತ್ತಿದ್ದು, ಆಕರ್ಷಕ ಚಿನ್ನದ ಆ್ಯಂಟಿಕ್ ಆಭರಣಗಳು ಮಹಿಳೆಯರ ಮನಸೂರೆಗೊಂಡಿವೆ. ನವನವೀನ ಶೈಲಿಯ ಹಳದಿ ವಜ್ರಾಭರಣಗಳ ಪ್ರದರ್ಶನದಲ್ಲಿ ಚಿನ್ನದ ನೆಕ್ ಲೇಸ್ ಗಳು, ಹಾರ, ಚೌಕರ್, ಆಕರ್ಷಕ ಡಿಸೈನ್ಸ್ ಗಳ ಬಳೆಗಳು, ಮೇಕಿಂಗ್ ಜಾರ್ಚಸ್ ಇಲ್ಲದೇ, ಆಕರ್ಷಕ ಡಿಸೈನ್ಸ್ ಗಳ ಕಲಾತ್ಮಕತೆಯ ಕುಸುರಿ ಕೆಲಸದ ಆಭರಣಗಳನ್ನು ಮೈತ್ರಿ ಮೈ ಜುವೆಲ್ಸ್ ನಲ್ಲಿ ಪಾರದರ್ಶಕತೆ ಮತ್ತು ಅತ್ಯಂತ ಕಡಿಮೆ ದರದಲ್ಲಿ ವ್ಯವಹರಿಸಲಾಗುತ್ತಿದೆ.
ಈ ಆ್ಯಂಟಿಕ್ ಜುವೆಲರಿ ಉತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿರುವ ಹಿನ್ನೆಲೆಯಲ್ಲಿ, ಆ. 28 ರ ಭಾನುವಾರದವರೆಗೆ ಬೋನಸ್ ಉತ್ಸವ ಆಚರಿಸಲಾಗುತ್ತಿದ್ದು, ಪ್ರತಿ ಗ್ರಾಹಕರು ಚಿನ್ನದ ಖರೀದಿ ಮಾಡಲು ಇದೊಂದು ಸುವರ್ಣಾವಕಾಶವಾಗಿದೆ. ಮಲೆನಾಡು ಶೈಲಿ ಆ್ಯಂಟಿಕ್ ಜುವೆಲರಿಗಳಿಗೆ ಮಾರುಹೋಗಿರುವ ಹೆಂಗಳೆಯರು, ಗೌರಿ-ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಮತ್ತಷ್ಟು ದಿನಗಳ ಕಾಲ ಈ ಉತ್ಸವ ನಡೆಸಲು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಈ ಉತ್ಸವ ಮುಂದುವರೆಸಲಾಗಿದ್ದು, ಚಿನ್ನ-ಬೆಳ್ಳಿಯ ನೂತನ ಮತ್ತು ಪುರಾತನ ಶೈಲಿಯ ಆಭರಣಗಳಿಗಾಗಿ ಮೈತ್ರಿ ಮೈ ಜುವೆಲ್ಸ್ ಗೆ ದಾಪುಗಾಲಿಡುತ್ತಿದ್ದಾರೆ.
ಅಷ್ಟೇ ಅಲ್ಲದೇ, ಆಭರಣಗಳ ಸಂಗ್ರಹಣ ಯೋಜನೆ ಸದಸ್ಯತ್ವ ಕೂಡ ನೀಡಲಾಗುತ್ತಿದ್ದು, ಜೊತೆಗೆ ಲಕ್ಕಿ ಡಿಪ್ ಕೊಡುಗೆಯನ್ನು ಕೂಡ ಮೈತ್ರಿ ಮೈ ಜುವೆಲ್ಸ್ ಸಾದರಪಡಿಸುತ್ತಿದ್ದು, ಚಿನ್ನದ ಮಳಿಗೆಯ ಈ ವಿಶೇಷ ಉತ್ಸವದಲ್ಲಿ, ವಿವಿಧ ಆಕರ್ಷಕ ಡಿಸೈನ್ಸ್ ಗಳ ಆಭರಣಗಳ ಅಪರಿಮಿತ ಆಯ್ಕೆಗಳ ಅನನ್ಯ ಸಂಗ್ರಹ ಮೈತ್ರಿ ಮೈ ಜುವೆಲ್ಸ್ ಮಳಿಗೆಯಲ್ಲಿದೆ.
ಆಭರಣಗಳ ಮೇಲೆ ಹೂಡಿಕೆ ಮಾಡಲು ಈಗ ಕಾಲ ಪಕ್ವವಾಗಿದ್ದು, ಮಹಿಳೆಯರು ಆಭರಣಗಳನ್ನು ಖರೀದಿಸಿ ಮನೆಗೆ ಸಮೃದ್ಧಿಯಿಂದ ಕೊಂಡೊಯ್ಯಬೇಕೆಂಬ ಅಭಿಲಾಷೆ ನಮ್ಮದು. ಮುಂಬರುವ ಮದುವೆ ಸಮಾರಂಭಗಳಿಗೆ, ಹಬ್ಬ-ಹರಿದಿನಗಳಿಗೆ ಆಭರಣಗಳನ್ನು ಕೊಂಡುಕೊಳ್ಳಲು ಮೈತ್ರಿ ಮೈ ಜುವೆಲ್ಸ್ ಉತ್ತಮ ವೇದಿಕೆಯಾಗಿದೆ. ಶಿವಮೊಗ್ಗ ಸೇರಿದಂತೆ, ಸುತ್ತಮುತ್ತಲಿನ ನಾಗರೀಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಮೈತ್ರಿ ಮೈ ಜುವೆಲ್ಸ್ ನ ಆ್ಯಂಟಿಕ್ ಚಿನ್ನದ ಉತ್ಸವ ಸಹಕಾರಿಯಾಗಿದೆ.
ಸಂಸ್ಕೃತಿಯ ಆಭರಣಗಳು ಒಂದೇ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗುತ್ತಿರುವುದು ನಮಗೆ ಹೆಮ್ಮೆಯ ಹೆಮ್ಮೆಯ ವಿಷಯವಾಗಿದ್ದು, ಮಹಿಳೆಯರಿಗಾಗಿ ಆ್ಯಂಟಿಕ್ ಚಿನ್ನದ ಉತ್ಸವವನ್ನು ನಾವು ಆಯೋಜಿಸಿದ್ದೆವೆ. ಮದುವೆ, ಹಬ್ಬ, ಶುಭ ಕಾರ್ಯಗಳಿಗೆ ಮೆರಗು ನೀಡಲು, ಮೈತ್ರಿ ಮೈ ಜುವೆಲ್ಸ್ ಆಭರಣ ಮಳಿಗೆಯಲ್ಲಿ ಈ ಒಂದು ವಿನೂತನ ಆ್ಯಂಟಿಕ್ ಚಿನ್ನದ ಉತ್ಸವ ಆಯೋಜಿಸಲಾಗಿದೆ. ಭಾರತೀಯ ಶೈಲಿಯ ಒಡವೆಗಳ ಉತ್ಸವ ಆಗಸ್ಟ್ 19 ರಿಂದ 25 ರವರೆಗೆ 6 ದಿನಗಳ ಕಾಲ ಇದ್ದು, ಇದನ್ನು ಆ.28 ರವರೆಗೆ ಗ್ರಾಹಕರ ಒತ್ತಾಸೆ ಮೇರೆಗೆ ಉತ್ಸವ ಮುಂದುವರೆಯುತ್ತಿದ್ದು, ಗ್ರಾಹಕರು ಈ ಉತ್ಸವವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಗ್ರಾಹಕರಲ್ಲಿ ಸಂಸ್ಥೆ ಸಿಇಓ ಆಗಿರುವ ಶ್ರೀ ಸೆಂಥಿಲ್ ವೇಲನ್ ಮನವಿ ಮಾಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post