ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಎನ್.ಜಿ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಸಾಮಾನ್ಯ ವರ್ಗದ ಅಡಿಯಲ್ಲಿ ಎನ್.ಜಿ. ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ. ಉಳಿದಂತೆ ಸಾಮಾನ್ಯ ಮಹಿಳೆ ವರ್ಗದಲ್ಲಿ ಭದ್ರಾವತಿಯ ಹೇಮಾವತಿ ವಿಶ್ವನಾಥ ರಾವ್, ಸಾಮಾನ್ಯ ಸದಸ್ಯರ ವರ್ಗದ ಅಡಿಯಲ್ಲಿ ಭದ್ರಾವತಿಯ ವಿ. ಕದಿರೇಶ್ ಹಾಗೂ ಶಿವಮೊಗ್ಗದ ಚಂದ್ರಶೇಖರ್ ಮತ್ತು ಪರಿಶಿಷ್ಟ ಜಾತಿ ವರ್ಗದ ಅಡಿಯಲ್ಲಿ ಶಿವಮೊಗ್ಗದ ಜಿ. ಮಂಜುನಾಥ್ ಅವರುಗಳನ್ನು ಸದಸ್ಯರುಗಳನ್ನಾಗಿ ತತಕ್ಷಣದಿಂದಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post