ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿರುವ ಫ್ರೀಡಂ ಪಾರ್ಕ್’ಗೆ ಅಲ್ಲಮಪ್ರಭು ಅವರ ಹೆಸರಿಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ Minister Madhu Bangarappa ಅವರು ಸಿಎಂ ಸಿದ್ದರಾಮಯ್ಯ CM Siddaramaiah ಅವರಿಗೆ ಮನವಿ ಮಾಡಿದ್ದಾರೆ.
ಯುವನಿಧಿ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಲಮಪ್ರಭು ಅವರು ವಚನಗಳ ಮೂಲಕ ಸಮಾಜಕ್ಕೆ ಬಹಳಷ್ಟು ಮಾರ್ಗದರ್ಶನ ಮಾಡಿದ್ದಾರೆ. ಹೀಗಾಗಿ, ಶಿವಮೊಗ್ಗದ ಫ್ರೀಡಂ ಪಾರ್ಕ್’ಗೆ Freedompark ಅಲ್ಲಮಪ್ರಭು Allamaprabhu ಅವರ ಹೆಸರಿಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಒಂದು ಇತಿಹಾಸವನ್ನು ನಿರ್ಮಾಣ ಮಾಡಿದ್ದೇವೆ. ಕುವೆಂಪು ಅವರ ಸರ್ವಜನಾಂಗದ ತೋಟ ಮಾರ್ಗದರ್ಶನದ ನೆಲದಲ್ಲಿ ಯುವನಿಧಿ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ಸಂತೋಷದ ವಿಚಾರ ಎಂದರು.
ಗ್ಯಾರೆಂಟಿ ಪ್ರಣಾಳಿಕೆಯಲ್ಲಿ ನನ್ನನ್ನು ಉಪಾಧ್ಯಕ್ಷರನ್ನಾಗಿ ಮಾಡಿದ್ದು, ರಾಜ್ಯದ ಜನಕ್ಕೆ ಈ ಗ್ಯಾರೆಂಟಿಗಳು ಮುಟ್ಟುತ್ತಿವೆ ಎಂದರೆ ನನ್ನ ಪುಣ್ಯದ ಕೆಲಸವಾಗಿದೆ ಎಂದರು.
Also read: ಯುವನಿಧಿ | ಹರಿದು ಬಂದ ಜನಸಾಗರ | ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿದ ಸಂಚಾರ ದಟ್ಟಣೆ
ಶಿಕ್ಷಣ ಸಚಿವ ಸ್ಥಾನ ನೀಡಿ, ಮಕ್ಕಳೀಗೆ ಶಿಕ್ಷಣ ನೀಡುವ ಪುಣ್ಯದ ಕೆಲಸ ನೀಡಿದ ನಿಮಗೆ ಧನ್ಯವಾದಗಳು ಎಂದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ನಮ್ಮ ಸರ್ಕಾರಕ್ಕೆ ಮಹಿಳೆಯರಿಗೆ ಬಹಳ ಪ್ರೀತಿ ಇದೆ. ಶಕ್ತಿ ಯೋಜನೆಯಡಿ 1 ಕೋಟಿ ಮಹಿಳೆಯರು ಉಚಿತವಾಗಿ ಪುಕ್ಕಟ್ಟೆಯಾಗಿ ರಾಜ್ಯವನ್ನು ಸಂಚರಿಸಿದ್ದಾರೆ. ಈ ನಾಡು ಸಾಕಷ್ಟು ಸಂತರಿಗೆ, ಹೋರಾಟ, ಸಾಧಕರಿಗೆ ಹುಟ್ಟನ್ನು ಕೊಟ್ಟಿದೆ ಎಂದರು.
ಚುನಾವಣೆ ಪೂರ್ವಕವಾಗಿ ನಮ್ಮ ಎರಡು ಕಣ್ಣು ಸಿದ್ದರಾಮಯ್ಯ, ಡಿಕೆಶಿ ಅವರುಗಳಾಗಿದ್ದಾರೆ ಎಂದರು.
ಶರಾವತಿ ಸಂತಸ್ತರಿಗೆ, ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುವ ರೈತರಿಗೆ, ಸಂಕಷ್ಟದಲ್ಲಿರುವ ಇವರಿಗೆ ಶಾಶ್ವತವಾಗಿ ಹಕ್ಕುಪತ್ರ ವಿತರಿಸುವ ಕೆಲಸ ಸರ್ಕಾರದಿಂದ ಮಾಡಬೇಕು ಎಂದು ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post