ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಫಲ. ಕೆಂಪೇಗೌಡರ ಜನಪರವಾದ ಜಾತ್ಯತೀತ ಆಡಳಿತ ನಮಗೆ ಮಾದರಿ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಮ್. ಶ್ರೀಕಾಂತ್ ಹೇಳಿದರು
ನಮ್ಮೂರ ಬಳಗದ ವತಿಯಿಂದ ನಗರದ ಅಲ್ಲಮಪ್ರಭು ಮೈದಾನ, ಫ್ರೀಡಂ ಪಾರ್ಕ್ ನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತೋತ್ಸವವನ್ನು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ , ಸಿಹಿ ವಿತರಿಸಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯದ ಧೀಮಂತ ನಾಯಕ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು. ಎಲ್ಲಾ ಜಾತಿ, ಧರ್ಮ, ಮತ, ಪಂಥ, ಭಾಷೆಯ ಜನರಿಗೆ ಆಶ್ರಯ ನೀಡಿರುವ ಬೆಂಗಳೂರು ಇವರ ದೂರದೃಷ್ಟಿಯ ಮತ್ತು ಸಮುದಾಯ ಕೇಂದ್ರಿತ ಆಡಳಿತದ ವೈಭವ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಭವ್ಯ ಪರಂಪರೆಯ ಗೌರವ ಹಾಗೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಮೂಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು
Also read: ಮುಸಲ್ಮಾನರೇ ಇಲ್ಲದ ಊರಲ್ಲಿ ಅದ್ದೂರಿ ಮೊಹರಂ ಆಚರಣೆ: ಭಾವೈಕ್ಯತೆ ಸಾರಿದ ಬಂಜಾರ ಸಮುದಾಯ
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ .ರಂಗನಾಥ್, ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ , ಸಿ ರವಿ, ಜಿ.ಡಿ ಮಂಜುನಾಥ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸಿಟಿ ಬ್ಯಾಂಕ್ ನಿರ್ದೇಶಕ ಬಿ ಲೋಕೇಶ್, ಸಂಚಾಲಕರಾದ ಹೆಚ್.ಪಿ ಗಿರೀಶ್, , ಚಂದ್ರು ಗೆಡ್ಡೆ, ಗುರುಪ್ರಸಾದ್, ಎಸ್ ಬಸವರಾಜ್, ವಿನಯ್, ಸುಬ್ರಮಣಿ,ಕುಮಾರ್, ಕೇಬಲ್ ಲೋಕೇಶ್, ಕೆ ಎಲ್ ಪವನ್, ರಾಜೇಶ್ ಮಂದಾರ, ಮಿಥುನ್, ಪುಷ್ಪಕ್ ಕುಮಾರ್ ,ಶಿವಮೊಗ್ಗ ವಿರೂಪಾಕ್ಷ, ಭವಾನಿ ರಾವ್, ಹಾಗೂ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









