ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ನಾರಾಯಣ ಹೆಲ್ತ್ ಸಂಸ್ಥೆಯು ಶಿವಮೊಗ್ಗದಲ್ಲಿ 5 ರಿಂದ 12 ವರ್ಷದೊಳಗಿನ ಮಕ್ಕಳಿಗಾಗಿ ಒಂದು ವಾರದ `ಹೆಲ್ದಿ ಕಿಡ್ಸ್ ಗೇಟ್ವೇ’ #HealthyKidsGateway ಕಾರ್ಯಾಗಾರವನ್ನು ಆಯೋಜಿಸಲು ಸಜ್ಜಾಗಿದೆ.
ಈ ಕಾರ್ಯಾಗಾರವು 2026 ರ ಮಾರ್ಚ್ 30 ರಿಂದ ಎಪ್ರಿಲ್ 4 ರವರೆಗೆ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಗರದ ಕುವೆಂಪು ರಸ್ತೆಯಲ್ಲಿರುವ ನಂಬಲ ಏಟ್ರಿಯಂನಲ್ಲಿ ನಡೆಯಲಿದೆ.
ಸಂವಾದಾತ್ಮಕ ತರಗತಿಗಳು ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಮೋಜು, ಕಲಿಕೆ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಒಟ್ಟಿಗೆ ಬೆಳೆಸುವುದು ಈ ಕಾರ್ಯಕ್ರಮ ಪ್ರಮುಖ ಉದ್ದೇಶವಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಆಸ್ಪತ್ರೆಯ ಪ್ರಮುಖರು, ಈ ಕಾರ್ಯಕ್ರಮವು ಮಕ್ಕಳ ಆರೋಗ್ಯ ಮತ್ತು ಜೀವನ ಶೈಲಿ ಮೇಲೆ ಕೇಂದ್ರೀಕರಿಸಿದ ಹಲವಾರು ಅಗತ್ಯ ವಿಷಯಗಳನ್ನು ಒಳಗೊಂಡಿರಲಿದೆ. ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಲು ಕ್ಲೀನ್ ಶೈನ್ ಹ್ಯಾಬಿಟ್ಸ್, ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸಲು ಈಟ್ ಸ್ಮಾರ್ಟ್, ಗ್ರೋ ಸ್ಟ್ರಾಂಗ್ ಹಾಗೂ ದೈಹಿಕ ದೃಢತೆಯನ್ನು ಉತ್ತೇಜಿಸಲು ಫಿಸಿಯೋಥೆರಪಿ ಆಧಾರಿತ ಮೋಜಿನ ಆಟಗಳನ್ನು ಒಳಗೊಂಡ ಜಂಪ್, ಸ್ಟ್ರೆಚ್ ಪ್ಲೇ ಎಂಬ ಪ್ರಮುಖ ಕಾರ್ಯಾಗಾರಗಳು ಇದರಲ್ಲಿರಲಿವೆ.
ಇದರೊಂದಿಗೆ, ಸೂಪರ್ ಸ್ಮೈಲ್ ಕೇರ್ #SuperSmileCare ವಿಭಾಗದ ಮೂಲಕ ಮಕ್ಕಳಿಗೆ ಹಲ್ಲಿನ ಸ್ವಚ್ಛಗೊಳಿಸುವಿಕೆ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಸೋಂಕು ತಡೆಗಟ್ಟುವಿಕೆ ಮತ್ತು ಅದಾರ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲು ವಿನ್ಯಾಸಗೊಳಿಸಲಾದ ಜರ್ಮ್ ಬಸ್ಟರ್ಸ್ ಚಟುವಟಿಕೆ (ಕೀಟಾಣು ನಿಯಂತ್ರಣ ಚಟುವಟಿಕೆ) ಅನ್ನು ಸಹ ನೀಡಲಾಗುವುದು.
ಈ ಕಾರ್ಯಕ್ರಮ ಭಾಗವಾಗಿ, ಭಾಗವಹಿಸುವ ಎಲ್ಲಾ ಮಕ್ಕಳಿಗೆ ಉಚಿತ ದಂತ ತಪಾಸಣೆಯನ್ನು #DentalCheckup ಒದಗಿಸಲಾಗುತ್ತದೆ. ಈ ಶಿಬಿರದಲ್ಲಿ ಕೇವಲ 40 ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, 199 ಪ್ರವೇಶ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ತಮ್ಮ ಮಕ್ಕಳನ್ನು ಈ ಕಾರ್ಯಾಗಾರಕ್ಕೆ ಸೇರಿಸಲು ಆಸಕ್ತಿ ಹೊಂದಿರುವ ಪೋಷಕರು ಹೆಚ್ಚಿನ ಮಾಹಿತಿಗಾಗಿ ಸಂಘಟಕರನ್ನು 98864 13131 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















