ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನ.7 ರಿಂದ 10ರ ವರೆಗೆ ಶಿವಮೊಗ್ಗ ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸಲು ಮತ್ತು ಪರಿತ್ಯಕ್ತ ಮಕ್ಕಳು ಕಂಡು ಬಂದಲ್ಲಿ 1098 ಮಾಹಿತಿ ನೀಡಲು ಸ್ಟಾಲ್ ಅಳವಡಿಸಲಾಗಿದೆ.
ಪ್ರತಿಯೊಂದು ಮಗುವೂ ಒಂದು ಕುಟುಂಬ ಅಥವಾ ಕುಟುಂಬದಂತಹ ವಾತಾವರಣಕ್ಕೆ ಅರ್ಹವಾಗಿದೆ ಎಂಬ ನಂಬಿಕೆಯಲ್ಲಿ ನೆಲೆಗೊಂಡಿರುವ ಈ ವರ್ಷದ ಅಭಿಯಾನವು, ವಿಶೇಷ ಅಗತ್ಯವಿರುವ ಮಕ್ಕಳ ಸಾಂಸ್ಥಿಕವಲ್ಲದ ಪುನರ್ವಸತಿಯನ್ನು ಉತ್ತೇಜಿಸುವಲ್ಲಿ ಎಲ್ಲರೂ ಸಹಯೋಗದಿಂದ ಕೆಲಸ ಮಾಡಲು ಕರೆ ನೀಡುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post