ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ #Kote Marikamba Jatra Mahothsava ಅಂಗವಾಗಿ ಫೆಬ್ರವರಿ 15ರಂದು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ #Tagaru Kalaga ಟ್ರೋಫಿಗಳನ್ನು ಸ್ಯಾಂಡಲ್‌ವುಡ್‌ನ ನಟರಾಕ್ಷಸ ಡಾಲಿ ಧನಂಜಯ್ #Dolly Dhananjaya ಅನಾವರಣಗೊಳಿಸಿದರು.
‘ಸಂಗೊಳ್ಳಿ ರಾಯಣ್ಣ, ವೀರ ಶಿವಪ್ಪ ನಾಯಕ, ಭಗೀರಥ, ವೀರ ಸಿಂಧೂರ ಲಕ್ಷ್ಮಣ ಟ್ರೋಫಿಗಳನ್ನು ಅನಾವರಣಗೊಳಿಸಿದ ಅವರು ಶಿವಮೊಗ್ಗ ಮಾರಿ ಜಾತ್ರೆಯ ಟಗರು ಕಾಳವು ಯಶಸ್ವಿಯಾಗಲೆಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ. ರಂಗನಾಥ್, ಗೌರವ ಸಂಚಾಲಕರುಗಳಾದ ನಾಗರಾಜ್ ಕಂಕರಿ, ಎಚ್ ಪಾಲಾಕ್ಷಿ, ಐಡಿಯಲ್ ಗೋಪಿ, ಪಿ.ಎಚ್ ಮಾಲ್ತೇಶ್, ಸಂಚಾಲಕರುಗಳಾದ ಹೆಚ್. ಪಿ. ಗಿರೀಶ್, ಎಂ ರಾಕೇಶ್, ರಾಜೇಶ್ ಮಂದಾರ, ಮನ್ವಿತ್ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















