ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವ್ಯಾಸ್ಕೂಲರ್ ದಿನಾಚರಣೆ ಅಂಗವಾಗಿ ಕಲರ್ ಡಾಪ್ಲರ್ ಪರೀಕ್ಷೆಗಳ ಮೇಲೆ ಶೇ. 30ರಷ್ಟು ರಿಯಾಯಿತಿಯನ್ನು ಆ. 30ರ ವರೆಗೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ವ್ಯಾಸ್ಕೂಲರ್ ಸರ್ಜನ್ ಡಾ. ಶ್ರೀಶ ರಾವ್ ತಿಳಿಸಿದ್ದಾರೆ.

Also read: ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಿ: ಸಚಿವ ಮಧುಬಂಗಾರಪ್ಪ
ಕಾಲಿನಲ್ಲಿ ರಕ್ತನಾಳಗಳಲ್ಲಿ ಸಮಸ್ಯೆ ಉಂಟಾಗಲು 3 ಮುಖ್ಯ ಕಾರಣಗಳಿವೆ. ಅವುಗಳೆಂದರೆ ತಂಬಾಕು ಸೇವನೆ, ಮಧುಮೇಹ ಕಾಯಿಲೆಗಳಿಂದ ಪಾದಗಳಲ್ಲಿ ಉಂಟಾಗುವ ಸೊಂಕು ಹಾಗೂ ರಸ್ತೆ ಅಪಘಾತ. ಅತಿಯಾದ ತಂಬಾಕು ಸೇವನೆ ಮತ್ತು ಧೂಮಪಾನದಿಂದ ಶುದ್ಧ ರಕ್ತನಾಳಗಳು ಮುಚ್ಚಲ್ಪಡುವುದಾಗಿದೆ. ಇದರಿಂದ ಕಾಲುಗಳಲ್ಲಿ ನಡೆದಾಡುವಾಗ ನೋವು ಉಂಟಾಗುತ್ತವೆ. ಕಾಲಕ್ರಮೇಣ ಇದನ್ನು ನಿರ್ಲಕ್ಷಿಸಿದ್ದಲ್ಲಿ ಕಾಲುಗಳಲ್ಲಿ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಳ್ಳುವ ಸಾದ್ಯತೆ ಹೆಚ್ಚಾಗಿರುತ್ತದೆ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















