ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತು ಪ್ರವಾಸ ಮಾಡಿರುವೆ, ಮಲೆನಾಡು ಭಾಗದಲ್ಲಿ ಅದ್ಭುತ ಬೆಂಬಲ ವ್ಯಕ್ತವಾಗುತ್ತಿದೆ. ಈ ಭಾರಿಯ ಚುನಾವಣೆಯಲ್ಲಿ ನನ್ನ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ. ರಘುಪತಿ ಭಟ್ #KRaghupatiBhat ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆಯ ಮೂರು ತಾಲ್ಲೂಕುಗಳಲ್ಲಿ ಪ್ರಚಾರ ಮಾಡಿ ಬಂದಿರುವೆ. ಎಲ್ಲಾ ಕಡೆ ಕಾರ್ಯಕರ್ತರು ನಮ್ಮ ಜೊತೆಗಿದ್ದರು. ಕೆ.ಎಸ್.ಈಶ್ವರಪ್ಪನವರು ನನಗೆ ಬೆಂಬಲ ನೀಡಿರುವುದು ಮತ್ತಷ್ಟು ಹುಮ್ಮಸ್ಸು ತಂದಿದೆ. ರಾಷ್ಟ್ರಭಕ್ತ ಹಿಂದುತ್ವವಾದಿಗಳು ಯಾವುದೇ ಪಕ್ಷದಲ್ಲಿದ್ದರು ನನಗೆ ಬೆಂಬಲ ನೀಡುತ್ತಾರೆ ಎಂದರು.

Also read: ಮೋದಿ ಗಡ್ಡ, ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಯಾಕೆ ಮಾತಾಡಲ್ಲ: ಮಧು ಬಂಗಾರಪ್ಪ ಪ್ರಶ್ನೆ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಭಾರಿ ಶಾಸಕನಾಗಿ ಎಲ್ಲಾ ವರ್ಗದ ಜನರ ಆಶಯಕ್ಕೆ ಸ್ಪಂಧಿಸಿದ್ದೇನೆ. ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಮಾಡಿದ್ದೇನೆ. ಇದು ನನಗೆ ಸಹಾಯಕವಾಗುತ್ತದೆ. ಮುಂದೆಯೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಪದವೀಧರರ ಅನೇಕ ಸಮಸ್ಯೆಗಳನ್ನು ಈಡೇರಿಸುತ್ತೇನೆ. ಸಮಸ್ಯೆಯನ್ನು ಅರಿತವರು ಮಾತ್ರ ಸಮಸ್ಯೆಗಳನ್ನು ನಿರ್ವಾಹಿಸುತ್ತಾರೆ ಎಂದರು.

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿಯಾಕುವ ಪ್ರಯತ್ನ ನಡೆಯುತ್ತಿದೆ. ಈ ರೀತಿ ಈಶ್ವರಪ್ಪನವರನ್ನು ಇಂತಹವುದೇ ಪ್ರಕರಣದಲ್ಲಿ ರಾಜೀನಾಮೆಯನ್ನು ಕೇಳಿದ್ದರು. ಇದೇ ಮಾನದಂಡವನ್ನು ಇಟ್ಟುಕೊಂಡು ಈಗ ಸಂಬಂಧಪಟ್ಟ ಈ ಇಲಾಖೆಯ ಸಚಿವರನ್ನು ರಾಜ್ಯ ಸರ್ಕಾರ ವಜಾಮಾಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಶಂಕರ್, ಕಾಚೀನಕಟ್ಟೆ ಸತ್ಯನಾರಾಯಣ, ಹ.ಮಾ.ಪ್ರಕಾಶ್,ವಕೀಲ ವಾಗೀಶ್, ಹೊನ್ನಾಳಿ ನಾರಾಯಣರಾವ್, ಬಾಲು, ಸುವರ್ಣ ಶಂಕರ್, ಮೋಹನ್ ಜಾಧವ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post