ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಯವರ ಸೋದರ ಮಾವ (ತಾಯಿಯ ಅಣ್ಣ) ಹಾಗೂ ಸೊರಬ ತಾಲೂಕಿನ ನಾಡಿಗೇರ್ ಕುಟುಂಬದ ಹಿರಿಯರಾದ ನೀಲಕಂಠರಾವ್ ನಾಡಿಗೇರ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಈ ಹಿಂದೆ ಭಾರತೀಯ ಜನಸಂಘದ ಸೊರಬ ತಾಲೂಕು ಅಧ್ಯಕ್ಷರಾಗಿ ಹಾಗೂ ಜನಸಂಘದ ಸಂದರ್ಭದಲ್ಲಿ ಪಕ್ಷದ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸೊರಬ ತಾಲೂಕಿನಲ್ಲಿ ಪಕ್ಷವನ್ನು ಕಟ್ಟಲು ಬೆನ್ನೆಲುಬಾಗಿ ನಿಂತಿದ್ದರು. ಅಂದಿನ ಸಂಕಷ್ಟದ ಸಮಯದಲ್ಲಿ ಪಕ್ಷಕ್ಕೆ ಅವರ ಸೇವೆ ನಿಜಕ್ಕೂ ಸ್ಮರಣೀಯವಾದದ್ದು.
ಸೊರಬ ತಾಲೂಕಿನ ಹೆಸರಾಂತ ನಾಡಿಗೇರ್ ಕುಟುಂಬದ ಹಿರಿಯರಾಗಿ ನಾಡಿಗೇರ್ ಕುಟುಂಬದ ನೇತೃತ್ವವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಮೂವರು ಪುತ್ರರಾದ ಮೋಹನ್ ರಾವ್ ನಾಡಿಗೇರ್, ಮುರಳೀಧರ್ ರಾವ್ ನಾಡಿಗೇರ್, ಶ್ರೀಧರ್ ರಾವ್ ನಾಡಿಗೇರ್, ಸೊಸೆಯಂದಿರು ಹಾಗೂ ಅಪಾರ ಬಂಧು – ಬಳಗದವರನ್ನು ಬಿಟ್ಟು ಅಗಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post