ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಟಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಜ.17 ಮತ್ತು 18 ರಂದು ಜೆ.ಎನ್.ಎನ್.ಸಿ.ಇ ಕ್ರೀಡಾಂಗಣದಲ್ಲಿ ಎನ್ಇಎಸ್ ನೌಕರರ ಕ್ರೀಡೋತ್ಸವ-2026 ಏರ್ಪಡಿಸಲಾಗಿದೆ.
ಜ.17 ರಂದು ಅಥ್ಲೆಟಿಕ್ಸ್, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿದ್ದು, ಸಂಜೆ 5:30 ಕ್ಕೆ ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜ.18 ರ ಭಾನುವಾರ ಬೆಳಗ್ಗೆ 7ಕ್ಕೆ ಎನ್ಇಎಸ್ ಕ್ರೀಡಾಂಗಣದಿಂದ ಜೆ.ಎನ್.ಎನ್.ಸಿ ಕ್ರೀಡಾಂಗಣದವರೆಗೆ, ಸುಮಾರು 1500 ಕ್ಕೂ ಹೆಚ್ಚು ನೌಕರರಿಂದ ವಿಶೇಷ ಮ್ಯಾರಥಾನ್ ಏರ್ಪಡಿಸಲಾಗಿದೆ. ನಂತರ ವಿವಿಧ ವಿದ್ಯಾಸಂಸ್ಥೆಗಳ ನೌಕಕರಿಂದ ಪಥಸಂಚಲನ ನಡೆಯಲಿದ್ದು, ಎನ್ಇಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ವಿವಿಧ ಕ್ರೀಡಾಸ್ಪರ್ಧೆಗಳ ಫಿನಾಲೆ ನಂತರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿದೆ ಎಂದುತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















