ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಾಣಿಜ್ಯ ವಿದ್ಯಾರ್ಥಿಗಳಿಗೆ #Commerce Students ಉದ್ಯೋಗ ನೀಡುವ ಸಂಸ್ಥೆಗಳ ಅವಶ್ಯಕತೆಗಳ ಅನುಗುಣವಾಗಿ ಕೌಶಲ್ಯತೆ ರೂಪಿಸಲು ಹಾಗೂ ವಾಣಿಜ್ಯ ಕ್ಷೇತ್ರದ ವಾಸ್ತವತೆಯ ಜ್ಞಾನವನ್ನು ಮತ್ತಷ್ಟು ಉನ್ನತಿಕರಿಸಲು ನಗರದ ಎನ್‌ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾಸ್ಡ್ ಸ್ಟಡೀಸ್ ಕಾಲೇಜು #NESIAS Collage ಬೆಂಗಳೂರಿನ ಪ್ರತಿಷ್ಟಿತ ಮೈಲಾಜಿಕ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಸ್ಕೂಲ್ ನೊಂದಿಗೆ #Mylogic Business Management School ಒಡಂಬಡಿಕೆ ಮಾಡಿಕೊಂಡಿದೆ.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಶಿವಪ್ರಸಾದ್ ಮತ್ತು ಮ್ಯಾನೇಜ್ಮೆಂಟ್ ಸ್ಕೂಲ್ ಸಿಇಓ ಸಿಎ ವಿನೋದ್ ಚಂದ್ರನ್ ಅವರು ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದರು.
ಜಾಗತೀಕರಣದ ನಂತರ ವಾಣಿಜ್ಯ ಕ್ಷೇತ್ರದಲ್ಲಿ ಅನೇಕ ವಿಫುಲ ಅವಕಾಶಗಳು ಲಭ್ಯವಿದೆ. ಅಂತಹ ಅವಕಾಶಗಳನ್ನು ಪಡೆಯುವಲ್ಲಿ ವಿದ್ಯಾರ್ಥಿಗಳನ್ನು ತಯಾರಿ ಮಾಡಲು ಈ ಒಡಂಬಡಿಕೆ ಪೂರಕವಾಗಿದೆ. ಈ ಒಡಂಬಡಿಕೆಯ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಬಗೆಯ ಅಧಯಯನ ಸಾಮಾಗ್ರಿಗಳು, ತರಬೇತಿ ಕಾರ್ಯಾಗಾರಗಳು ಆನ್ಲೈನ್ ಮತ್ತು ನೇರ ಚರ್ಚೆಯ ಮೂಲಕ ಸಿಗಲಿದೆ. ಇದರಿಂದ ಶೈಕ್ಷಣಿಕ ವಿದ್ಯಾಭ್ಯಾಸದ ಹಂತದಲ್ಲಿಯೆ ಯುಎಸ್-ಸಿ.ಎಂ.ಎ (ಸರ್ಟಿಫೈಯಡ್ ಮ್ಯಾನೇಜ್ಮೆಂಟ್ ಅಕೌಂಟಿಂಗ್) ಪರೀಕ್ಷೆಗಳಲ್ಲಿ ತಯಾರಾಗಲು ಹಾಗೂ ಉತ್ತಿರ್ಣ ಹೊಂದುವ ಅವಕಾಶ ಸಿಗಲಿದೆ. ಜೊತೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಾಗಲಿದೆ ಎಂದು ಪ್ರಾಂಶುಪಾಲ ಡಾ.ಬಿ.ಎಸ್.ಶಿವಪ್ರಸಾದ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post